ಕೆಸಿ ವ್ಯಾಲಿ ಯೋಜನೆ: ಕೋಲಾರ ಜನತೆಯಲ್ಲಿ ಸಂತಸ

ಕೋಲಾರ: ಸ್ವಾತಂತ್ರ್ಯದ ದಿನಗಳಿಂದ ನೀರಾವರಿ ಯೋಜನೆಗಾಗಿ ಕಾದು ಕುಳಿತಿದ್ದ ಲಕ್ಷಾಂತರ ರೈತರು ಇಂದು ಖುಷಿಯಾದ ಪ್ರಸಂಗ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಲು ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ 130 ಕೆರೆಗಳನ್ನು ತುಂಬಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈ ಯೋಜನೆಗೆ ಕೆ.ಸಿ. ವ್ಯಾಲಿ ಯೋಜನೆ ಎಂದು ಹೆಸರಿಡಲಾಗಿತ್ತು. ₹1400 ಕೋಟಿ ರೂಪಾಯಿ ವೆಚ್ಚದ ಯೋಜನೆಯ ಇಂದು ಪರೀಕ್ಷಾರ್ಥ ಪ್ರಯೋಗ ನಡೆಯಿತು.ಇಂದು ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಕೆರೆಗೆ ಕೆಸಿ ವ್ಯಾಲಿ ನೀರು ಬಿಡಲಾಯಿತು.
ಇನ್ನು ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕೋಲಾರದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ವೆಂಕಟೇಶ್​, ಕೆ.ಸಿ. ವ್ಯಾಲಿ ಯೋಜನೆಯನ್ನು ಒಂದೂವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಯೋಜನಗೆ ಅಡಿಗಲ್ಲು ಹಾಕಿದ್ದರು. ಇನ್ನು ಈ ಯೋಜನೆಗಾಗಿ ಜಿಲ್ಲೆಗೆ ಹೋರಾಟ ಮಾಡಿ ತರಿಸುವಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶಕುಮಾರ್​ ಯಶಸ್ವಿಯಾಗಿದ್ದರು. ಇನ್ನು ಈ ಯೋಜನೆಗೆ ಆರಂಭದಲ್ಲಿ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಲು ಸತಾಯಿಸಿದ್ದರು. ಇನ್ನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪೈಪ್​ಲೈನ್​ ಅಳವಡಿಸುವ ಕಾರ್ಯದಲ್ಲಿ ಆದ ಸಾಕಷ್ಟು ಅಡೆತಡೆಗಳು, ನಿಭಾಯಿಸಿಕೊಂಡು ಚುನಾವಣೆಗೆ ಮುನ್ನ ನೀರು ತರಬೇಕೆಂದು ಪ್ರಯತ್ನ ಮಾಡಿದರು, ಆದ್ರೆ ಅಂದುಕೊಂಡಷ್ಟು ಬೇಗ ನೀರು ಬರಲಿಲ್ಲ. ಆದ್ರೆ ಸ್ವಲ್ಪ ತಡವಾಗಿಯಾದ್ರೂ ನೀರು ಜಿಲ್ಲೆಯನ್ನು ಪ್ರವೇಶ ಮಾಡಿದೆ ಅನ್ನೋದು ನೆಮ್ಮದಿಯ ತಂದಿದೆ ಎಂದು ವೆಂಕಟೇಶ್​ ಸಂತಸ ಹಂಚಿಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv