ಡಾ.ರಾಜ್​ ಪುಣ್ಯತಿಥಿಗೆ ‘ಕವಲುದಾರಿ’ ರಿಲೀಸ್..!

ಸ್ಯಾಂಡಲ್​ವುಡ್​ನಲ್ಲಿ ಏಪ್ರಿಲ್ ತಿಂಗಳನ್ನು ಡಾ.ರಾಜ್​ ಮಾಸ ಅಂತಲೇ ಕರೆಯುತ್ತಾರೆ. ಯಾಕೆಂದರೆ ಡಾ.ರಾಜ್​ ಹುಟ್ಟಿದ್ದು ಇದೇ ತಿಂಗಳ 24ರಂದು. ಹಾಗೇ ಅವರು ಅಮರರಾದದ್ದೂ ಇದೇ ತಿಂಗಳಲ್ಲಿ. ಹೀಗಾಗಿ ತಿಂಗಳುದ್ದಕ್ಕೂ ಡಾ.ರಾಜ್​ ಸ್ಮರಣೆ ನಡೆಯುತ್ತೆ.  ಪುನೀತ್​ ರಾಜ್​ಕುಮಾರ್​ ತಮ್ಮ ಪ್ರೊಡಕ್ಷನ್​ನ ಮೊದಲ ಪ್ರೆಸ್ಟೀಜಿಯಸ್ ಸಿನಿಮಾ ಕವಲುದಾರಿಯನ್ನು ಡಾ.ರಾಜ್​ಗೆ ಅರ್ಪಿಸುತ್ತಿದ್ದಾರೆ. ಅರ್ಥಾತ್​ ರಾಜ್ ಪುಣ್ಯ ಸ್ಮರಣೆಯಂದು ಅಂದ್ರೆ ಇದೇ ತಿಂಗಳ 12ರಂದು ಪುನೀತ್​ ಮೊದಲ ಪ್ರೊಡಕ್ಷನ್​ನಲ್ಲಿ ನಿರ್ಮಾಣವಾಗಿರೋ ಕವಲುದಾರಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಈ ಮೂಲಕ ಪುನೀತ್​ ಅಪ್ಪನಿಗೆ ಸಿನಿಮಾ ಅರ್ಪಿಸುತ್ತಿದ್ದಾರೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಿರ್ದೇಶಕ ಹೇಮಂತ್ ರಾವ್ ಈ ಚಿತ್ರದ ಸೂತ್ರಧಾರನಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಪಿಆರ್​​ಕೆ ಪ್ರೊಡಕ್ಷನ್ಸ್ ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಈ ಚಿತ್ರದ ನಾಯಕರಾದ್ರೆ, ಅನಂತ್ ನಾಗ್, ಸುಮನಾ ರಂಗನಾಥ್, ಅಚ್ಚುತ್ ಕುಮಾರ್ ಹಾಗೂ ರೋಷನಿ ಪ್ರಕಾಶ್ ಹೀಗೆ ಕಲಾವಿದರ ದಂಡೇ ಚಿತ್ರದಲ್ಲಿದೆ. ಟ್ರೈಲರ್ ಮೂಲಕ ಸದ್ದು, ಸುದ್ದಿ ಮಾಡ್ತಿರೋ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv