ಈ ಎಲೆಕ್ಷನ್​​​ ಮೇಲಿರುತ್ತೆ ‘ಕವಲುದಾರಿ’ ಎಫೆಕ್ಟ್​..!!

ಇವತ್ತು ರಾಜ್ಯಾದ್ಯಂತ ತೆರೆಕಂಡಿರೋ ಹೇಮಂತ್‌ರಾವ್ ನಿರ್ದೇಶನದ ಕವಲುದಾರಿ ಸಿನಿಮಾಗೂ ಇನ್ನ ಕೆಲವೇ ದಿನಗಳಲ್ಲಿ ನೆಡೆಯಲಿರೋ ಲೋಕಸಭಾ ಚುನಾವಣೆಗೂ ಒಂದು ರೀತಿ ಕನೆಕ್ಷನ್ ಏರ್ಪಡಲಿದೆ ಅಂತಿದೆ ಚಿತ್ರತಂಡ. ಈ ಬಗ್ಗೆ ಚಿತ್ರದಲ್ಲಿ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಅಭಿನಯಿಸಿರೋ ಹಿರಿಯನಟ ಅನಂತ್‌ನಾಗ್ ಚಿತ್ರದ ಬಗ್ಗೆ ಮಾತನಾಡ್ತಾ ಅದು ಹೇಗೆ ಅಂತಾ ವಿವರಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲೇ ನಿರ್ಣಾಯಕ!

ಕವಲುದಾರಿ ಎಮೋಷನಲ್‌ ಕ್ರೈಮ್‌ ಥ್ರಿಲ್ಲರ್‌ ಸಬ್ಜೆಕ್ಟ್ ಜೊತೆಗೆ ಪೊಲಿಟಿಕಲ್‌ ಡ್ರಾಮಾ ಇರೋ ಸಿನಿಮಾ. ಚಿತ್ರ ಕ್ರೈಂ ಥ್ರಿಲ್ಲರ್ ಆದ್ರೂ ಸಾಮಾಜಿಕವಾಗಿ, ರಾಜಕೀಯವಾಗಿ ಅರ್ಥಪೂರ್ಣವಾಗಿದೆ. ಕ್ರಿಮಿನಲೈಸೇಶನ್ ಆಫ್ ಪಾಲಿಟಿಕ್ಸ್ ಸರಿಯೇ? ಇಂಥದ್ದೊಂದು ಸಮಸ್ಯೆಯನ್ನು ಮೊದಲ ಬಾರಿಗೆ ಭಾರತೀಯ ಚಿತ್ರವೊಂದರಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿ ರಾಜಕಾರಣದ ಅಪರಾಧೀಕರಣದ ಕುರಿತ ಮಹತ್ವದ ಚರ್ಚೆಗಳಿವೆ . ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕ್ರಿಮಿನಲೈಸೇಶನ್ ಆಫ್ ಪಾಲಿಟಿಕ್ಸ್ ಇರೋದು ಗೊತ್ತಿರೋದೆ. ದುರಂತ ಅಂದ್ರೆ ಇಲ್ಲಿರುವ ಅಪರಾಧಿಗಳೇ ರಾಜಕಾರಣಕ್ಕೆ ಬರೋದು. ಅದೇ ಭಯಂಕರ. ಹೀಗಿರುವಾಗ ಎಲೆಕ್ಷನ್ ಹೊಸ್ತಿಲಲ್ಲಿ ಜನನಾಯಕರನ್ನ ಆರಿಸಬೇಕಿರುವಾಗ ಈ ಚಿತ್ರ ನೋಡಿದ ಪ್ರೇಕ್ಷಕನಿಗೆ ಚಿತ್ರ ಏನೋ ಹೇಳುತ್ತದೆ. ಯುವಕರು ಯಾವ ಥರದ ನಾಯಕ ನಿಮಗೆ ಬೇಕು ಅನ್ನೋದನ್ನ ಆರಿಸಿಕೊಳ್ಳೋಕೆ ಚಿತ್ರ ಸಹಾಯ ಮಾಡಲಿದೆ. ಚಿತ್ರಕ್ಕೆ ಸಬ್‌ಟೈಟಲ್ಸ್ ಮಾಡಿದ್ದಾರೆ. ಭಾರತದಾದ್ಯಂತ ಜನ ಸಿನಿಮಾ ನೋಡಲಿದ್ದಾರೆ. ಹಾಗೆ ನೋಡಿದ್ರೆ ಕರ್ನಾಟಕ ಚಿತ್ರರಂಗದ ಇತಿಹಾಸದಲ್ಲಿ ದೇಶದ ಮಟ್ಟಿಗೇನೆ ಚಿತ್ರ ನಿರ್ಣಾಯಕವಾಗಲಿದೆ’ ಅನ್ನೋದು ಅನಂತ್‌ನಾಗ್ ಅವರ ಅಭಿಪ್ರಾಯ.