ಚೇಂಜ್​ ಕೇಳೋ ಜನರ ಟೇಸ್ಟ್​ಗೆ ತಕ್ಕಂತಿದೆ ‘ಕವಲುದಾರಿ’

ಸಿನಿಮಾ: ಕವಲುದಾರಿ
ತಾರಾಗಣ: ಅನಂತ್​ನಾಗ್​, ರಿಷಿ, ರೋಷಿನಿ ಪ್ರಕಾಶ್​, ಅಚ್ಯುತ್​ ರಾವ್​, ಅವಿನಾಶ್, ರವಿ
ನಿರ್ದೇಶನ: ಹೇಮಂತ್​ ರಾವ್​
ಸಂಗೀತ: ಚರಣ್​ ರಾಜ್​
ಕ್ಯಾಮರಾ: ಅದ್ವೈತ ಗುರುಮೂರ್ತಿ
ಸ್ಟಂಟ್ಸ್ : ಡಾ.ಕೆ. ರವಿವರ್ಮ
ನಿರ್ಮಾಣ: ಪಿ.ಆರ್.​ಕೆ ಪ್ರೊಡಕ್ಷನ್ಸ್​

ರಸ್ತೆ ಅಗಲೀಕರಣದ ಟೈಮ್​ನಲ್ಲಿ ಒಂದೇ ಕುಟುಂಬದ ಅಸ್ತಿಗಳು ಸಿಗ್ತವೆ, ಈ ಅಸ್ತಿಗಳ ಹಿಂದೆ ಏನೋ ವಿಷಯ ಇದೆ ಅನ್ನೋ ಕುತೂಹಲದಲ್ಲಿ ಟ್ರಾಫಿಕ್​​ ಇನ್ಸ್​ಪೆಕ್ಟರ್​ ಶ್ಯಾಮ್​ಗೆ ಅನ್ನಿಸುತ್ತೆ. ಅದ್ರೆ ಸಂಚಾರಿ ವಿಭಾಗದ ಶ್ಯಾಮ್​ಗೆ ಈ ಕೇಸ್​ ತನಿಖೆ ನಡೆಸಲು ಇಲಾಖೆಯೇ ಸಹಕರಿಸೋದಿಲ್ಲ, ಆದ್ರೆ ಈ ಅಸ್ತಿಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ನಿಧಿಯೊಂದು ಪುರಾತತ್ವ ಇಲಾಖೆಯಿಂದ ದರೋಡೆಯಾದ ಪ್ರಕರಣದ ದಿಕ್ಕು ತೋರಿಸುತ್ತೆ, ಅದ್ರ ಬೆನ್ನು ಹತ್ತಿದ ಶ್ಯಾಮ್​ಗೆ ಆ ಕೇಶ್​​ನ ತನಿಖೆ ಮಾಡಿ ಅರ್ಧಕ್ಕೆ ಬಿಟ್ಟ ನಿವೃತ್ತ ಪೊಲೀಸ್​ ಅಧಿಕಾರಿ ಮುತ್ತಣ್ಣ(ಅನಂತ್​ನಾಗ್​)ರ ಅವಶ್ಯಕಥೆ ಬೀಳುತ್ತೆ. ಈ ಮಾಜಿ ಹಾಲಿ ಪೊಲೀಸ್​ ಅಧಿಕಾರಿಗಳು 2 ದಾರಿಯಲ್ಲಿ ಕೇಸ್​ ತನಿಖೆ ಶುರು ಮಾಡ್ತಾರೆ. ಫೈನಲಿ ಈ ಅಸ್ತಿಗಳ ಅಸ್ತಿತ್ವ ತಿಳಿಯುತ್ತಾ? ನಿಧಿಯ ದರೋಡೆಕೋರ ಸಿಗ್ತಾನಾ? ಅನ್ನೋದೇ ಕವಲುದಾರಿಯ​ ಕಥೆ..!
ಪ್ರತಿ ಪಾತ್ರವನ್ನೂ ಸ್ಕೆಚ್​ ಮಾಡಿಕೊಂಡಿದ್ದಾರೆ ನಿರ್ದೇಶಕರು
ಅನಂತ್​ನಾಗ್​ ಒಬ್ಬ ಸ್ಟಾರ್ ಅಟ್ರಾಕ್ಷನ್​ ಅಂತಲೋ, ರಿಷಿಯನ್ನ ಪೊಲೀಸ್​ ಮಾಡಬೇಕು ಅಂತಲೋ ಸಿನಿಮಾ ಮಾಡದೇ, ಸಿನಿಮಾದ ಕಥೆ ಬಯಸಿದ ಪಾತ್ರಗಳಿಗೆ ಸ್ಟಾರ್​​ಕಾಸ್ಟ್​ನ ಆಯ್ಕೆ ಮಾಡಿದ್ದಾರೆ ನಿರ್ದೇಶಕ ಹೇಮಂತ್​ ರಾವ್. ಎಂದಿನಂತೆ ಅನಂತ್​ನಾಗ್​ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಅನಂತ್​ನಾಗ್​ ಬರೀ ಮುಖ, ಕಣ್ಣುಗಳು, ಧ್ವನಿ ಮಾತ್ರವಲ್ಲದೆ, ಅವ್ರ ಕಾಲು, ಕೈಗಳು ಸಹ ನಟಿಸಿರೋದು ವಿಶೇಷ. ಇನ್ನು ರಿಷಿ ನಮ್ಮ ಅಕ್ಕಪಕ್ಕದಲ್ಲೇ ಇರೋ ಪೊಲೀಸ್​ ಅಧಿಕಾರಿ ಅನ್ನಿಸ್ತಾರೆ. ಇನ್ನು ಅಚ್ಯತ್​ ರಾವ್​, ಅವಿನಾಶ್​, ರೋಷಿನಿ ಪ್ರಕಾಶ್​ ಪ್ರಮುಖ ವಿಲ್​ ಪಾತ್ರದಲ್ಲಿ ರಂಗಭೂಮಿ ಕಲಾವಿದ ರವಿ ಅದ್ಭುತ, ಲೆಕ್ಕಾ ಹಾಕ್ತಾ ಹೋದ್ರೆ ಸಿನಿಮಾದಲ್ಲಿ 2 ಡಜನ್​​ಗೂ ಮಿಕ್ಕು ಪಾತ್ರಗಳು ಬಂದು ಹೋಗ್ತವೆ, ಆದ್ರೆ ಯಾವ ಪಾತ್ರವನ್ನೂ ಅನಾವಶ್ಯಕವಾಗಿ ತುರುಕಿಲ್ಲ ನಿರ್ದೇಶಕರು.
ಬಾಲಿವುಡ್​​ ಸ್ಟೈಲ್​ ಮೇಕಿಂಗ್​, ಆ ಕಾಲದ ಪ್ರೆಸೆಂಟೇಷನ್​
ಕವಲುದಾರಿ ಸಿನಿಮಾ ನೋಡ್ತಾ ಇದ್ರೆ ಒಂದು ಪತ್ತೇದಾರಿ ಕಾದಂಬರಿಯನ್ನ ಓಡ್ತಾ ಇರೋ ಫಿಲ್ ಆಗುತ್ತೆ. ಸದ್ಯ ವೆಬ್​​​ ಸೀರಿಸ್​, ಅಡ್ವಾನ್ಸ್​ ಆಗಿರೋ ಸಿನಿಮಾ ನೋಡೋ ಪ್ರೇಕ್ಷಕರ ವೇಗಕ್ಕೆ ತಕ್ಕಂತೆ ಸಿನಿಮಾದ ಸ್ಕ್ರೀನ್​ ಪ್ಲೇ ಮಾಡಿದ್ದಾರೆ ನಿರ್ದೇಶಕರು. ಕೆಲವೊಂದು ಎಮೋಷನಲ್​ ಸೀನ್​ಗಳು ಗಾಂದಿ ಕ್ಲಾಸ್​ ಪ್ರೇಕ್ಷಕನಿಗೆ ಎಳೆದಂತೆ ಅನ್ನಿಸಿದ್ರು, ಕ್ಲಾಸ್​ ಆಡಿಯೆನ್ಸ್​ಗೆ ಅದು ತುಂಬಾನೇ ಕನೆಕ್ಟ್​ ಆಗುತ್ತೆ. ಮೇಕಿಂಗ್​ನಲ್ಲಿ ಸಿನಿಮಾ ಟೀಮ್​ನ ಜಾಣ್ಮೆ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಕಲರ್ ಗ್ರೇಡಿಂಗ್​ನಿಂದ ಹಿಡಿದು ಸೀನ್​ಗೆ ತಕ್ಕಂಥ ಬ್ಯಾಕ್​ಗ್ರೌಂಡ್​ ಸ್ಕೋರಿಂಗ್​ ಸಿನಿಮಾದ ಮೇಕಿಂಗ್​ನ ಆಳ ತೋರಿಸುತ್ತೆ. ಮೇಕಪ್​​, ಕಾಸ್ಟ್ಯೂಮ್​​ ಎಲ್ಲಕ್ಕಿಂತ ಹೆಚ್ಚಾಗಿ ಪ್ರೆಸೆಂಟೇಷನ್​ ವಿಷಯದಲ್ಲಿ ಸಿನಿಮಾ ಗೆಲ್ಲುತ್ತೆ. ಕಥೆಯನ್ನ ಮೊದಲೇ ಗೆಸ್​ ಮಾಡಬಹುದಾದ್ರೂ, ಕೊನೇ ಸೀನ್​ನ ವರೆಗೂ ಟ್ವಿಸ್ಟ್ಗಳ ಸರಮಾಲೆಯನ್ನೇ ಪೋಣಿಸಿದ್ದಾರೆ ನಿರ್ದೇಶಕರು.
ಪ್ಲಸ್​ ಹಲವು ಮಂದಿಗೆ, ಮೈನಸ್​ ಕೆಲವು ಮಂದಿಗೆ
ಬಾಲಿವುಡ್​, ಹಾಲಿವುಡ್​ ಸಿನಿಮಾಗಳನ್ನ ಕನ್ನಡ ಸಿನಿಮಾಗಳಿಗೆ ಹೋಲಿಕೆ ಮಾಡೋ ಜನರಿಗೆ ಈ ಸಿನಿಮಾ ಸೂಪರ್​ ಅನ್ನಿಸುತ್ತೆ. ಆದ್ರೆ ಕನ್ನಡ ಸಿನಿಮಾಗಳನ್ನ ನೋಡ್ತಾ ಬಂದಿರೋರಿಗೆ, ಅದೇ ಥರಹದ ಸಿನಿಮಾಗಳನ್ನ ನೋಡ ಬಯಸಿ ಥಿಯೇಟರ್​ಗೆ ಹೋದವರಿಗೆ ಲೈಟಾಗಿ ಬೋರ್​ ಅನ್ನಿಸುತ್ತೆ. ಆದ್ರೆ ಸಿನಿಮಾದ ಸ್ಕ್ರೀನ್​​ ಪ್ಲೇ ಉದ್ದಕ್ಕೂ ಇರೋ ಟ್ವಿಸ್ಟ್ ಅಂಡ್​ ಟರ್ನ್​ಗಳು ಮಜಾಕೊಡ್ತವೆ. ಚರಣ್​ ರಾಜ್​ ಮ್ಯೂಸಿಕ್​ನಲ್ಲಿ, ಅದ್ರಲ್ಲೂ ಬ್ಯಾಕ್​ಗ್ರೌಂಡ್​ ಸ್ಕೋರ್​ನಲ್ಲಿ ಮ್ಯಾಜಿಕ್​ ಮಾಡಿದ್ದಾರೆ. ಕ್ಯಾಮರಾ ಮನ್​ ಅದೈತ ಗುರುಮೂರ್ತಿ ಸಿನಿಮಾದುದ್ದಕ್ಕೂ ತಮ್ಮ ಕೈಚಳಕ ತೋರಿದ್ದಾರೆ. ಕನ್ನಡ ಸಿನಿಮಾದ ಮೇಕಿಂಗ್​ನ ನೆಕ್ಸ್ಟ್​ ಲೆವೆಲ್​​ಗೆ ತೆಗೆದುಕೊಂಡು ಹೋಗಿರೋದು ಪ್ಲಸ್​ ಆದ್ರೆ, ಸಿನಿಮಾದ ಅವಧಿ ಮೈನಸ್​ ಅನ್ನಬಹುದು.
ಎಂಜಾಯ್​ ಮಾಡಬಹುದು, ಒಳ್ಳೆಯದನ್ನೂ ಕಲೀಬಹುದು.!
ಕವಲುದಾರಿ ಸಿನಿಮಾವನ್ನ ಸಮವಸ್ತ್ರ ತೊಡುವ ಪ್ರತಿಯೊಬ್ಬರಿಗೆ ಅರ್ಪಿಸಿದೆ ಸಿನಿಮಾ ಟೀಮ್​. ಈ ಸಿನಿಮಾ ನೋಡಿದ ಮೇಲೆ ಪೊಲೀಸರ ಮೇಲೆ ಗೌರವ ಹೆಚ್ಚಾಗುತ್ತೆ, ಮುಂಬರುವ ಎಲೆಕ್ಷನ್​ನಲ್ಲಿ ಓಟ್​ ಹಾಕುವ ಮತದಾರನ ನಿಲುವು ಬದಲಾಗುತ್ತೆ ಎಲ್ಲವೂ ನಿಜ. ಯಾಕಂದ್ರೆ ಸಿನಿಮಾದ ಕ್ರೈಂ ಕಥಾನಕ ನಿಧಾನವಾಗಿ ರಾಜಕಾರಣದಲ್ಲಿ ಕ್ರಿಮಿನಲ್ಸ್​ ಮೊದಲು ಇದ್ದರು, ಈಗಲೂ ಇದ್ದಾರೆ, ಮುಂದೆಯೂ ಇರ್ತಾರೆ ಅನ್ನೋ ತಿರುಳನ್ನ ಹೊಂದಿದೆ. ಸಿಂಪಲ್ಲಾಗಿ ಎಂಟರ್​ಟೈನ್​ ಮಾಡೋದ್ರ ಜೊತೆಗೆ ಮಲಗಿರೋ ಪ್ರಜೆಗಳನ್ನ ಎಚ್ಚರಿಸೋ ಕೆಲಸವಮನ್ನ ಪುನೀತ್​ ರಾಜ್​ಕುಮಾರ್​ ತಮ್ಮ ನಿರ್ಮಾಣದ ಮೊದಲ ಸಿನಿಮಾದಲ್ಲೇ ಮಾಡಿದ್ದಾರೆ. ಒಮ್ಮೆ ನೋಡಿ ಖುಷಿ ಪಡಬಹುದು. ಡಿಟೈಲ್​ ಆಗಿ ಸಿನಿಮಾ ಅರ್ಥ ಆಗಿಲ್ಲ ಅಂದ್ರೆ ಮತ್ತೆ ಕೂಡ ನೋಡಬಹುದು.

ವಿಮರ್ಶೆ: ಕಿರಣ್​ ಚಂದ್ರ