ವಿದೇಶದಲ್ಲೂ ಶಿವಣ್ಣನ ’ಕವಚ’ ಸಿನಿಮಾ ದರ್ಬಾರ್ ..!

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್​ವುಡ್ ಸಿನಿಮಾಗಳು ವಿದೇಶದಲ್ಲೂ ಅಬ್ಬರಿಸುತ್ತಿವೆ. ಬಾಲಿವುಡ್ ಸಿನಿಮಾಗಳಿಗೂ ಟಕ್ಕರ್ ಕೊಡೋ ಮೂಲಕ ಚಂದನವನದ ಸಿನಿಮಾ ತಾಕತ್ತು ಏನು ಅನ್ನೋದನ್ನ ವಿಶ್ವಕ್ಕೆ ಸಾರಲು ಹೊರಟಿವೆ. ಕೆಜಿಎಫ್ ಸಿನಿಮಾದ ಮೂಲಕ ಆರಂಭವಾದ ಗೆಲುವಿನ ನಾಗಾಲೋಟ ಈಗಲೂ ಮುಂದುವರಿದಿದೆ. ಅಂದ್ಹಾಗೆ ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಕವಚ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ನಡುವೆ ವಿದೇಶದಲ್ಲೂ ದರ್ಬಾರ್ ತೋರಿಸೋಕೆ ರೆಡಿಯಾಗಿದ್ದು ನಾಳೆಯಿಂದ ಅಮೇರಿಕಾದ ಸುಮಾರು 20ಕ್ಕೂ ಅಧಿಕ ಸೆಂಟರ್​ಗಳಲ್ಲಿ ಚಿತ್ರ ತೆರೆಕಾಣ್ತಿದೆ. ಜೊತೆಗೆ ಇದೇ ತಿಂಗಳ 28ರಿಂದ ಕೆನಾಡದಲ್ಲೂ ಕಾರುಬಾರು ಶುರುಮಾಡಲಿದೆ.

ಅಂಧನ ಪಾತ್ರಕ್ಕೆ ಶಿವಣ್ಣ ಜೀವ..!
ಜಿವಿಆರ್ ವಾಸು ನಿರ್ದೇಶನದಲ್ಲಿ ಮೂಡಿಬಂದಿರೋ ಕವಚ ಸಿನಿಮಾ ಮಲಯಾಳಂನ ಒಪ್ಪಂ ಚಿತ್ರದ ರಿಮೇಕ್ ಇದಾಗಿದೆ. ಚೊಚ್ಚಲ ಬಾರಿಗೆ ಶಿವಣ್ಣ ಅಂಧನ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಇದೊಂದು ಅಪ್ಪ ಮಗಳ ಬಾಂಧವ್ಯದ ಎಳೆಯನ್ನು ಹೊಂದಿರೋ ಅದ್ಭುತ ಚಿತ್ರ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಸಿಷ್ಠ ಸಿಂಹ, ಇಶಾ ಕೊಪ್ಪಿಕರ್ ಸೇರಿದಂತೆ ಬಹುತೇಕರು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಮೇಕಿಂಗ್ ಹಾಗೂ ಹಾಡುಗಳಿಂದಲೇ ಜನಮೆಚ್ಚುಗೆ ಪಡೆದಿರೋ ಸಿನಿಮಾ ಮುಂದಿನ ದಿನಗಳಲ್ಲಿ ವಿದೇಶದಲ್ಲೂ ಕಮಾಲ್ ಮಾಡುವ ನಿರೀಕ್ಷೆ ಇದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv