ಕರ್ತವ್ಯಕ್ಕೆ ಗೈರಾದ ಕಟ್ನೂರು ಗ್ರಾ.ಪಂ ಪಿಡಿಓ ಅಮಾನತು

ಹುಬ್ಬಳ್ಳಿ: ಕರ್ತವ್ಯಕ್ಕೆ ಗೈರಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಪಿಡಿಓ ಅವರನ್ನು ಅಮಾನತು ಮಾಡಿ ಧಾರವಾಡ‌‌ ಜಿಲ್ಲಾ ಪಂಚಾಯ್ತಿ ಸಿಇಓ ಸತೀಶ್ ಆದೇಶ‌ ಹೊರಡಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮ ಪಂಚಾಯತಿ ಪಿಡಿಓ ಅಶ್ವಿನಿ ಆಲತಗಿ ಅಮಾನತುಗೊಂಡವರು. ಇವರು ಹೆರಿಗೆಗೆಂದು ಸತತವಾಗಿ ರಜೆ ತಗೆದುಕೊಂಡಿದ್ದರು. ಕಳೆದ ಎಂಟು ತಿಂಗಳಿಂದ ಕೆಲಸಕ್ಕೆ ಗೈರಾಗಿದ್ದು, ಇದುವರೆಗೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೆರಿಗೆ ರಜೆ ಮುಕ್ತಾಯವಾದ್ರೂ ಕೆಲಸಕ್ಕೆ ಪಿಡಿಓ ಅಶ್ವಿನಿ ಹಾಜರಾಗದ ಕಾರಣ, ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv