ಬಾಗಲಕೋಟೆ ಕಾರ ಹುಣ್ಣಿಮೆ ಸಂಭ್ರಮ ಜೋರು

ಬಾಗಲಕೋಟೆ: ಜಿಲ್ಲೆಯಾದ್ಯಂತ ಇಂದು ರೈತರ ಹಬ್ಬ ಕಾರ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದ ರೈತರು ತಮ್ಮ ಎತ್ತುಗಳನ್ನು ಸ್ವಚ್ಛವಾಗಿ ತೊಳೆದು ಸಿಂಗರಿಸಿದ್ರು. ಅಲ್ಲದೆ ಅವುಗಳಿಗೆ ವಿಶಿಷ್ಟ ಖಾದ್ಯ ತಿನ್ನಿಸುವ ಮೂಲಕ ಅನ್ನದಾತರು ತಮ್ಮ ಎತ್ತುಗಳ ಮೇಲಿನ‌ ಅಭಿಮಾನ ಮೆರೆದ್ರು. ಇನ್ನು ಸಂಜೆ ನಗರದ ವಲ್ಲಭ ಭಾಯಿ ಚೌಕ್ ನಿಂದ ಕೃಷ್ಣ ಟಾಕೀಸ್​ವರೆಗೆ ಎತ್ತುಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಹಬ್ಬವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಆಗಮಿಸಿದ್ರು. ಈ ಬಾರಿ ಓಟದಲ್ಲಿ ಬಿಳಿ ಎತ್ತು ಮೊದಲ ಸ್ಥಾನದಲ್ಲಿ ಓಡಿ ಬಂದು ಕರಿ ಹರದಿದ್ದಕ್ಕೆ ನಾಡಿನಲ್ಲಿ ಬಿಳಿ ಜೋಳದ ಫಸಲು ಚೆನ್ನಾಗಿ ಬರುತ್ತೇ ಅನ್ನೋ ನಂಬಿಕೆ ಎಲ್ಲರಲ್ಲಿ ಮೂಡಿತು. ಇನ್ನು ಇತ್ತ ಎತ್ತುಗಳು ಒಂದೆಡೆ ಕಂಡು ಬಂದ್ರೆ ಸಾಲು ಸಾಲಾಗಿ ರಸ್ತೆಯ ಇಕ್ಕೆಲಗಳಲ್ಲಿ ನಿಂತ ರೈತರು ಕೇಕೆ ಹಾಕಿ ಸಂಭ್ರಮಿಸಿದ್ರು. ಒಟ್ಟಿನಲ್ಲಿ ಈ ಬಾರಿಯೂ ಬಾಗಲಕೋಟೆಯಲ್ಲಿ ಕಾರ ಹುಣ್ಣಿಮೆ ಸಡಗರ ಜೋರಾಗಿಯೇ ಕಂಡು ಬಂದಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv