ಕಾರ್ತಿ ಚಿದಂಬರಂಗೆ ಸೇರಿದ ₹54 ಕೋಟಿ ಆಸ್ತಿ ಜಪ್ತಿ

ನವದೆಹಲಿ: ಹಿರಿಯ ಕಾಂಗ್ರೆಸ್​ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಆಸ್ತಿಯನ್ನು ಜಾರಿ ನಿರ್ದೇಶರ್ನಾಲಯ ಜಪ್ತಿ ಮಾಡಿದೆ. ಐಎನ್​ಎಕ್ಸ್​​ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ, ಭಾರತ, ಇಂಗ್ಲೆಂಡ್ ಹಾಗೂ ಸ್ಪೇನ್​​ನಲ್ಲಿನ ಕಾರ್ತಿ ಚಿದಂಬರಂ ಆಸ್ತಿಯನ್ನು ಸೀಜ್ ಮಾಡಿದೆ.

ಕಾರ್ತಿ ಅವರಿಗೆ ಸೇರಿದ ಇಂಗ್ಲೆಂಡ್​​ನ ಸಾಮರ್​ಸೆಟ್​​ನಲ್ಲಿರೋ ಕಾಟೇಜ್​ ಹಾಗೂ ಮನೆ, ಸ್ಪೇನ್​​ನ ಬಾರ್ಸಿಲೋನಾದಲ್ಲಿರೋ ಟೆನ್ನಿಸ್​​ ಕ್ಲಬ್​​​​ ಸೀಜ್​ ಆಗಿದೆ. ಇದರ ಜೊತೆಗೆ ಚೆನ್ನೈನ ಬ್ಯಾಂಕ್​​ನಲ್ಲಿ ಅಡ್ವಾಂಟೇಜ್​ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್​​​ ಪ್ರೈವೇಟ್​​ ಲಿಮಿಟೆಡ್​(ಎಎಸ್​​ಸಿಪಿಎಲ್​) ಹೆಸರಿನಲ್ಲಿ ಇಡಲಾಗಿದ್ದ ₹90 ಲಕ್ಷ ಫಿಕ್ಡ್ಸ್​​ ಡೆಪಾಸಿಟ್​​ ಕೂಡ ಜಪ್ತಿ ಮಾಡಲಾಗಿದೆ. ಈ ಆಸ್ತಿಗಳು ಕಾರ್ತಿ ಚಿರಂಬರಂ ಹಾಗೂ ಎಎಸ್​​ಸಿಪಿಎಲ್​ ಸಂಸ್ಥೆಯ ಹೆಸರಿನಲ್ಲಿದೆ ಎಂದು ಇಡಿ ಹೇಳಿದೆ.

ಏನಿದು ಐಎನ್​ಎಕ್ಸ್​ ಮೀಡಿಯಾ ಪ್ರಕರಣ? 

2007 ರಲ್ಲಿ ತಮ್ಮ ತಂದೆ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ, ಕಾರ್ತಿ ಚಿದಂಬರಂ ತಂದೆಯ ಪ್ರಭಾವ ಬಳಸಿ, ಐಎನ್​ಎಕ್ಸ್​​ ಮೀಡಿಯಾಗೆ ಸುಮಾರು ₹300 ಕೋಟಿಯಷ್ಟು ವಿದೇಶಿ ಹೂಡಿಕೆಗೆ ಸರ್ಕಾರದಿಂದ ಕ್ಲಿಯರೆನ್ಸ್​ ಕೊಡಿಸಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಇದಕ್ಕಾಗಿ ಆಗ ಐಎನ್​​ಎಕ್ಸ್​ ಮೀಡಿಯಾದ ಮಾಲೀಕರಾಗಿದ್ದ ಪೀಟರ್​ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿಯಿಂದ ಕಾರ್ತಿ ಚಿದಂಬರಂ ಕಿಕ್​​ಬ್ಯಾಕ್​​ ಪಡೆದಿರುವ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್​ಐಆರ್​​ ಆಧರಿಸಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ಸಂಗ್ರಹ ತಡೆ ಕಾಯ್ದೆಯಡಿ ಕೇಸ್​ ದಾಖಲಿಸಿಕೊಂಡಿತ್ತು. ಪ್ರಕರಣ ಸಂಬಂಧ ಇಡಿ ಈ ಹಿಂದೆ ಕಾರ್ತಿ ಚಿದಂಬರಂ ಅವರನ್ನ ವಿಚಾರಣೆಗೂ ಒಳಪಡಿಸಿತ್ತು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv