ಕರ್ನಾಟಕದಲ್ಲಿ ಕಳುವಾದ ಕಾರು ಮಧ್ಯಪ್ರದೇಶದಲ್ಲಿ ಸಿಕ್ತು..!

ಹುಬ್ಬಳ್ಳಿ: ನಗರದಲ್ಲಿ ಕಳ್ಳತನವಾಗಿದ್ದ ₹16 ಲಕ್ಷ ಮೌಲ್ಯದ ಕಾರನ್ನು ಪತ್ತೆ ಹಚ್ಚುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ಸಿಯಾಗಿದ್ದಾರೆ. ಕಳೆದ ಮೇ 3ರಂದು ಕೆಎ 26 ಎಮ್​ 8166 ಸ್ಕಾರ್ಪಿಯೋ ಕಾರು ಕಳ್ಳತನವಾಗಿತ್ತು. ಸೆಟ್ಲಮೆಂಟ್ ನಿವಾಸಿ ಅರುಣ ದತ್ತವಾಡ ಎಂಬುವವರಿಗೆ ಸೇರಿದ ಕಾರನ್ನ ಖದೀಮರು ಎಗರಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರಿಗಾಗಿ ಶೋ ನಡೆಸ್ತಿದ್ರು. ಈ ವೇಳೆ ಮಧ್ಯಪ್ರದೇಶದ ನಿಮುಚ ಜಿಲ್ಲೆಯ ಹಂಗಾರಿಯಾ ಗ್ರಾಮದಲ್ಲಿ ಪೊಲೀಸರು ಕಾರನ್ನು ಪತ್ತೆ ಹಚ್ಚಿದ್ದಾರೆ. ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಾಟ ಮಾಡಲು ದುಷ್ಕರ್ಮಿಗಳು ಬಳಸಿರುವ ಶಂಕೆ ವ್ಯಕ್ತವಾಗಿದೆ. ಕಾರು ಪತ್ತೆ ಹಚ್ಚಿರುವ ಪೊಲೀಸರು ಇದೀಗ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv