‘ಕರ್ನಾಟಕದ ಯಶಸ್ಸಿನ ಬಗ್ಗೆ ಕೇಳಿ ಹೆಮ್ಮೆ ಆಗ್ತಿತ್ತು, ಈಗ ಕಾನೂನು ವ್ಯವಸ್ಥೆ ಬಗ್ಗೆ ವ್ಯಥೆಯಾಗುತ್ತೆ’

ಸಂತೆಮರಹಳ್ಳಿ: ನಾನು ಚಿಕ್ಕವನಿದ್ದಾಗ ಕರ್ನಾಟಕದ ಸಾಧನೆ, ಯಶೋಗಾಥೆ ಬಗ್ಗೆ ಕೇಳಿದ್ರೆ ನನ್ನ ಎದೆ ಹೆಮ್ಮೆಯಿಂದ ಉಬ್ಬುತ್ತಿತ್ತು. ಆದ್ರೆ, ಕಳೆದ ಐದು ವರ್ಷಗಳಲ್ಲಿ ಇಲ್ಲಿ ಲಾ ನೂ ಇಲ್ಲ, ಆರ್ಡರೂ ಇಲ್ಲ ಇದು ನೋವು ತರುವಂಥ ಸಂಗತಿ ಅಂತಾ ಪ್ರಧಾನಿ ನರೇಂದ್ರ ಮೋದಿ ಮಾರ್ಮಿಕವಾಗಿ ಕುಟುಕಿದ್ದಾರೆ. ಇಂದು ಚಾಮರಾಜ ನಗರ ಜಿಲ್ಲೆಯ ಸಂತೆಮರಹಳ್ಳಿಯಲ್ಲಿ ಮಾತನಾಡುತ್ತಿದ್ದ ಮೋದಿ,ಚಾಮರಾಜನಗರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯು ನೀರಿಲ್ಲದೆ ಬರದಿಂದ ಬವಣೆ ಪಡುತ್ತಿದೆ. ಇಲ್ಲಿ ಉದ್ಯೋಗಾವಕಾಶವೇ ಇಲ್ಲವಾಗಿದೆ. ಕಪ್ಪು ಕಲ್ಲು ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ಸಾಗಿದೆ ಎಂದು ಟೀಕಿಸಿದ್ರು.

ದಾರಿತಪ್ಪಿಸುವುದು, ಒಡೆಯುವುದು ಕಾಂಗ್ರೆಸ್ ಸಂಸ್ಕೃತಿ..!
ಒಟ್ಟಾಗಿರುವುದನ್ನು ಒಡೆಯುವುದು, ದಾರಿ ತಪ್ಪಿಸುವುದು ಮತ್ತು ತಡೆಯೊಡ್ಡುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಅಂತಾ ಪ್ರಧಾನಿ ಮೋದಿ ಹೇಳಿದ್ರು. ನಮ್ಮದು ಕೆಲಸ ಮಾಡುವ ಸರಕಾರ, ಕೆಲಸದಲ್ಲಿ ಮಗ್ನರಾಗಿರುವ ಜನರನ್ನು ದಾರಿ ತಪ್ಪಿಸುವುದೇ ಅವರ ತಂತ್ರವಾಗಿದೆ. ಆದ್ದರಿಂದ ಕರ್ನಾಟಕದ ಜನತೆಯೇ ನಿಮಗೆ ಇದನ್ನು ಬದಲಿಸುವ ಅವಕಾಶ ನಿಮ್ಮೆದುರಿಗೇ ಬಂದಿದೆ. ಮೇ 12ರ ಚುನಾವಣೆಯಲ್ಲಿ ಕೇಂದ್ರ ಸರಕಾರದ ವಿಕಾಸ ಯೋಜನೆಗಳಿಗೆ ಮತ ಹಾಕಿ ಎಂದು ಕರೆ ನೀಡಿದ್ರು.

ಅಲ್ಲದೇ ಮಾತಿನ ಕೊನೆಗೆ ಕನ್ನಡದಲ್ಲಿಯೇ ಮಾತನಾಡಿದ ಪ್ರಧಾನಿ, ಬನ್ನಿ ಎಲ್ಲರೂ ಕೈಜೋಡಿಸಿ, ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ. ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ. ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ. ಭಾರತ ಮಾತೆಗೆ ಜೈ ಎಂದು  ಘೋಷಣೆ ಕೂಗಿ ಭಾಷಣ ಮುಗಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv