ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು ಪ್ರಥಮ ಸ್ಥಾನ

ಬೆಂಗಳೂರು: ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ಬಾರಿ 1.94 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮದ್ಯಾಹ್ನ 1 ಗಂಟೆಗೆ ಪ್ರಾಧಿಕಾರದ ಈ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು , ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜು ಮಾರತ್ತಳ್ಳಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಹತ್ತು ಸ್ಥಾನಗಳಲ್ಲಿ 7 ಸ್ಥಾನ ಬೆಂಗಳೂರಿಗೆ , 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಬಳ್ಳಾರಿಗೆ ಲಭಿಸಿದೆ. ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಪಿ.ಮಹೇಶ್ ಆನಂದ್, ಶ್ರೀ ಚೈತನ್ಯ ಟೆಕ್ನೋ ಪಿ.ಯು ಕಾಲೇಜು ಮಾರತ್ತಹಳ್ಳಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಿ.ಟಿ ದೇವೇಗೌಡ ಮಾಹಿತಿ ನೀಡಿದರು.

ಮೊದಲ ಹತ್ತು ಸ್ಥಾನಗಳಲ್ಲಿ 6 ಸ್ಥಾನ ಬೆಂಗಳೂರಿಗೆ, 2 ಸ್ಥಾನ ಮಂಗಳೂರಿಗೆ, 1 ಸ್ಥಾನ ಮೈಸೂರಿಗೆ ಮತ್ತು 1 ದಾವಣಗೆರೆಗೆ ಲಭಿಸಿದೆ. ಬಿಎಸ್‌ಸಿ ಕೃಷಿ ವಿಭಾಗದಲ್ಲಿ ಕೀರ್ತನ ಎಂ ಅರುಣ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬೆಂಗಳೂರು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಅದರಂತೆ, ಮೊದಲ 10 ಱಂಕ್‌ನಲ್ಲಿ ಬೆಂಗಳೂರಿಗೆ 3, ಮಂಗಳೂರಿಗೆ 4, ಮೈಸೂರಿಗೆ 1 ,ಹಾಸನಕ್ಕೆ 1, ಶಿವಮೊಗ್ಗಕ್ಕೆ 1 ಸ್ಥಾನ ಲಭಿಸಿದೆ.

ಪಶು ವೈದ್ಯಕೀಯ ವಿಭಾಗದಲ್ಲಿ ಪಿ.ಮಹೇಶ್ ಆನಂದ್ , ಚೈತನ್ಯ ಟೆಕ್ನೋ ಪಿ.ಯು ಕಾಲೇಜು ಮಾರತ್ತಳ್ಳಿ ಬೆಂಗಳೂರು ಮೊದಲ ಸ್ಥಾನ ಪಡೆದಿದ್ದಾರೆ. ಮೊದಲ 10ರಲ್ಲಿ ಬೆಂಗಳೂರಿಗೆ 8, ದಾವಣಗೆರೆಗೆ 1, ಮೈಸೂರಿಗೆ 1 ಸ್ಥಾನ ಲಭಿಸಿದೆ. ಮದ್ಯಾಹ್ನ 1 ಗಂಟೆಗೆ ಪ್ರಾಧಿಕಾರದ ಈ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. http://kar.results.nic.in ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. the


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv