ಏಕಾಂಗಿ ನಾನಮ್ಮ, ಹಿಂಗ್ಯಾಕೆ ಆಗಿಹೋಯ್ತಮ್ಮಾ ..!?

ಹುಬ್ಬಳ್ಳಿ: ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ, ಅದ್ರಲ್ಲೂ ಆಡಿಯೋದಲ್ಲಿನ ಧ್ವನಿ ತನ್ನದೇ ಎಂದು ಬಿಎಸ್​ ಯಡಿಯೂರಪ್ಪ ಒಪ್ಪಿಕೊಂಡ ಬೆನ್ನಲ್ಲೇ ವಿಪಕ್ಷಗಳು ಅವರ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸುತ್ತಿವೆ. ಈ ವೇಳೆ ಬಿಜೆಪಿ ಮುಖಂಡರು ಕೂಡ ಈ ಸನ್ನಿವೇಶವನ್ನು ಹೇಗೆ ಎದುರಿಸುವುದು? ಅಂತಾ ಚಿಂತನ-ಮಂಥನದಲ್ಲಿ ತೊಡಗಿದ್ದಾರೆ. ಈ ಸನ್ನಿವೇಶಕ್ಕೆ ರೂಪಕವೆಂಬಂತೆ ಬಿಎಸ್​ ಯಡಿಯೂರಪ್ಪ ಸ್ಟೇಜ್​ ಮೇಲೆ ಒಬ್ಬರೇ ಕುಳಿತುಕೊಂಡಿರುವ ಫೋಟೋ ಫಸ್ಟ್​ನ್ಯೂಸ್​​​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪ್ರಧಾನಿ ಮೋದಿ ಇಂದು ಸಂಜೆ ನಗರಕ್ಕೆ ಆಗಮಿಸಲಿದ್ದು ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ ಅವ್ರು ಸಮಾವೇಶದ ಸಿದ್ಧತೆಗಳನ್ನು ಅವಲೋಕಿಸಲು ಇಲ್ಲಿಗೆ ಆಗಮಿಸಿದ್ದಾರೆ.

ನಗರದ ಗಬ್ಬೂರು ಬೈಪಾಸ್ ಹತ್ತಿರದ ಕೆಎಲ್​ಇ ಮೆಡಿಕಲ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಯಡಿಯೂರಪ್ಪ ವೇದಿಕೆ ಹತ್ತಿ ಕುಳಿತುಕೊಂಡು ಪರಮಾರ್ಶಿಸಿದರು. ಆದ್ರೆ ಆ ವೇಳೆ, ಅವರ ಸುತ್ತಮುತ್ತ ಯಾರೂ ಇಲ್ಲದೇ ಏಕಾಂಗಿಯಾಗಿದ್ದರು.