ಹೆಸರಿಗೆ ಸಿಮೆಂಟ್​ ಲಾರಿ, ಆದ್ರೆ ಸಿಕ್ಕಿದ್ದು ಕಂತೆ ಕಂತೆ ಹಣ ..!

ಕೋಲಾರ: ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದ ಸಿಮೆಂಟ್ ಲಾರಿಯನ್ನು ಜಿಲ್ಲಾ ಚುನಾವಣಾಧಿಕಾರಿ ಜಿ. ಸತ್ಯವತಿ ಕೊಂಡರಾಜನಹಳ್ಳಿ ಬಳಿ ವಶಕ್ಕೆ ಪಡೆದಿದ್ದಾರೆ.
ಮುಳಬಾಗಿಲಿನಿಂದ ಬೆಂಗಳೂರಿಗೆ ಬರುತ್ತಿದ್ದ ಸಿಮೆಂಟ್​ ಲಾರಿಯಲ್ಲಿ ಸಿಮೆಂಟ್​ ಚೀಲಗಳ ಜೊತೆಗೆ ಹಣವನ್ನು ಚೀಲದಲ್ಲಿ ತುಂಬಿ ಸಾಗಣೆ ಮಾಡಲಾಗುತ್ತಿತ್ತು. ಕೋಲಾರದ ಹೊರವಲಯದ ಕೊಂಡರಾಜನಹಳ್ಳಿ ಚೆಕ್​ಪೋಸ್ಟ್ ಬಳಿ ತಪಾಸಣೆ ನಡೆಸಿದ ವೇಳೆ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. 500 ರೂಪಾಯಿ ನೋಟುಗಳನ್ನು ಹೊಂದಿದ್ದ 70 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸಿಮೆಂಟ್​ ಲಾರಿಯಲ್ಲಿ ಹಣ ಸಾಗಿಸುವ ಬಗ್ಗೆ ಕಂಟ್ರೋಲ್​ ರೂಂ ನೀಡಿದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಎಆರ್​ ಕಚೇರಿಯಲ್ಲಿ ಅಧಿಕಾರಿಗಳಾದ ಡಿಸಿ ಸತ್ಯವತಿ, ಎಸ್ಪಿ ರೋಹಿಣಿ ಕಟೋಜ್​ ಸಪೆಟ್​, ಕೋಲಾರ ಆರ್​ಓ ಶುಭ ಕಲ್ಯಾಣ್​ ತಪಾಸಣೆ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv