ನನಗೆ ಅಭಿಮಾನಿಗಳು, ಕರ್ನಾಟಕವೇ ’ಕವಚ‘: ಶಿವರಾಜ್​ಕುಮಾರ್​

ಬೆಂಗಳೂರು:  ಶಿವಣ್ಣ ಶಿವಮೊಗ್ಗಕ್ಕೆ ಕವಚ ಹೆಸರಿನಲ್ಲಿ ಕವಚ ತೊಟ್ಟು ನನ್ನ ತಂಗಿ ಹಾಗೂ ಭಾಮೈದ ಮಧು‌ಬಂಗಾರಪ್ಪನ ಪರ ಪ್ರಚಾರ ಮಾಡಲು ಶಿವಣ್ಣ ಬಂದಿದ್ರು. ಹೀಗಾಗಿ ಶಿವಣ್ಣ ಕವಚ ಕಳಚಬೇಕಾಗಿದೆ ಅಂತ ಕುಮಾರ್ ಬಂಗಾರಪ್ಪ ಹೇಳಿಕೆ ನೀಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ.ಅದು ಅವರ ಅಭಿಪ್ರಾಯ ಅಷ್ಟೇ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಅಭಿಮಾನಿಗಳೇ ಕವಚ, ಕರ್ನಾಟಕವೇ ನನಗೆ ಕವಚ, ಕನ್ನಡ ಇಂಡಸ್ಟ್ರಿ ನನಗೆ ಕವಚವಾಗಿದೆ ಅಂತ ಹೇಳುವ ಮೂಲಕ ನಾನು ಕವಚ ಸಿನಿಮಾದ ಪ್ರಚಾರಕ್ಕೆ ಹೋಗಿದ್ದು ಅಂತ ತಿಳಿಸಿದ್ರು.

ಡಾ.ರಾಜ್ ಕುಮಾರ್ ಪುಣ್ಯ ತಿಥಿಗೆ ಬಂದಿದ್ದ ವೇಳೆ ಶಿವಣ್ಣ ಮಾತನಾಡಿ ‘ಅಪ್ಪನ ಅಂಗಿ’ ಸಿನಿಮಾ ಬಗ್ಗೆ ಶಿವಣ್ಣನ ಮಾತನಾಡಿ, ರಾಘಣ್ಣ ಅಪ್ಪನ ಅಂಗಿ ಸಿನಿಮಾ ಮಾಡ್ತಿದ್ದಾರೆ. ಅಪ್ಪನಿಗೆ ಬಿಳಿ ಬಟ್ಟೆ ಅಂದ್ರೆ ತುಂಬಾ ಇಷ್ಟ. ಒಂದೇ ಒಂದು ಸಾರಿ ಜೀನ್ಸ್ ಪ್ಯಾಂಟ್ ತೊಡಸಿ ಅಪ್ಪಾಜಿಯನ್ನ ಏರ್ ಪೋರರ್ಟ್​ಗೆ ಕರೆದುಕೊಂಡು ಹೋಗಿದ್ದೆ. ಅವರು ಹಾಕಿರೋ ಬಟ್ಟೇನು ಬಿಳಿ..ಅವರ ಮನಸ್ಸು ಬಿಳಿ..ಅವರು ಇಡೀ ಇಂಡಸ್ಟ್ರಿಯನ್ನ ಕೂಡ ಬಿಳಿ ಮಾಡಿ ಹೋದ್ರು.

ಚುನಾವಣೆಗೆ ನಿಲ್ಲಿ ಅಂತಾ ಅಣ್ಣಾವ್ರಿಗೆ ಇಂದಿರಾ ಗಾಂಧಿ ಒತ್ತಾಯಿಸಿದ ಘಟನೆಯನ್ನ ನೆನೆದ ಶಿವಣ್ಣ, ಅಪ್ಪಾಜಿಗೆ ಚುನಾವಣೆಗೆ ನಿಲ್ಲಿ ಅಂತಾ ಇಂದಿರಾಗಾಂಧಿ ಒತ್ತಾಯ ಮಾಡಿದ್ರಂತೆ.ನಾವು ಆಗ ಚಿಕ್ಕ ಮಕ್ಕಳು. ಅಪ್ಪಾಜಿ  ಆಗ ಸಿನಿಮಾ ಶೂಟಿಂಗ್​ಗೆ ಬ್ರೇಕ್ ಕೊಟ್ಟಿದ್ರು. ಯಾವುದೋ ಹಳ್ಳಿಗೆ ಹೋಗಿ ಬಿಟ್ಟಿದ್ರು. ನಮಗೆ ಅಷ್ಟೊಂದು ನೆನಪಿಲ್ಲ. ಆದ್ರೆ ಅಪ್ಪಾಜಿಗೆ ರಾಜಕೀಯದ ಬಗ್ಗೆ ಆಸಕ್ತಿಯೇ ಇರಲಿಲ್ಲ ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv