ಮಧ್ಯಾಹ್ನ 3.30 ಗಂಟೆ ವೇಳೆಗೆ ಶೇ.49.96 ರಷ್ಟು ಮತದಾನ..

ಬೆಂಗಳೂರು: ದೇಶದಾದ್ಯಂತ ಇಂದು ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹಾಗೆಯೇ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾರರು ಬೂತ್​ಗಳತ್ತ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ. 7.38ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ ಶೇ. 14.37ರಷ್ಟು ಮತದಾನವಾಗಿತ್ತು , ಮಧ್ಯಾಹ್ನ 12 ಗಂಟೆವರೆಗೆ ಶೇ. 22.22 ಮತದಾನವಾಗಿತ್ತು. ಇದೀಗ 1 ಗಂಟೆವರೆಗೆ ಶೇಕಡಾ 36.31 ರಷ್ಟು ಮತದಾನ ನಡೆದಿತ್ತು. ಇದೀಗ 3.30ರ ವೇಳೆಗೆ ಶೇ. 49.96 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ಮಧ್ಯಾಹ್ನ 3.30 ಗಂಟೆಯ ಅಂಕಿ ಅಂಶದ ಪ್ರಕಾರ ಶಿವಮೊಗ್ಗದಲ್ಲಿ ಅತೀ ಹೆಚ್ಚು(ಶೇ..54.88ರಷ್ಟು) ಮತದಾನವಾಗಿದ್ದರೆ, ಕಲಬುರ್ಗಿಯಲ್ಲಿ ಅತೀ ಕಡಿಮೆ(ಶೇ.42.01 ರಷ್ಟು)  ಮತದಾನವಾಗಿದೆ.

ಮಧ್ಯಾಹ್ನ 3.30 ಗಂಟೆವರೆಗೆ ಶೇ. 49.96 ರಷ್ಟು ಮತದಾನ
ಚಿಕ್ಕೋಡಿ: ಶೇ.54.54
ಬೆಳಗಾವಿ: ಶೇ.48.66
ಬಾಗಲಕೋಟೆ: ಶೇ.52.09
ಬೀದರ್: ಶೇ.47.07
ವಿಜಯಪುರ: ಶೇ.43.83
ಕಲಬುರ್ಗಿ: ಶೇ.42.01
ರಾಯಚೂರು: ಶೇ. 45.95
ಬಳ್ಳಾರಿ: ಶೇ.51.91
ಕೊಪ್ಪಳ: ಶೇ.52.17
ಹಾವೇರಿ: ಶೇ.50.24
ಧಾರವಾಡ: ಶೇ.51.59
ಉತ್ತರ ಕನ್ನಡ: ಶೇ53.48
ದಾವಣಗೆರೆ: ಶೇ.53.90
ಶಿವಮೊಗ್ಗ: ಶೇ.54.88


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv