07 Mar 2018
ರಾಮನಗರ: ದೇವರಿಗೆ ಹರಕೆ ಹೊತ್ತು ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಭಕ್ತರು ದೇವರ ಮೊರೆ ಹೋಗುವುದು ಸಾಮಾನ್ಯ. ಇದಕ್ಕಾಗಿ ನಾನಾ ರೀತಿಯಲ್ಲಿ ದೇವರಿಗೆ ಸೇವೆ ಮಾಡುತ್ತಾರೆ. ಆದ್ರೆ ಇಲ್ಲಿನ ಭಕ್ತರು ತಲೆಗೆ ತೆಂಗಿನ ಕಾಯಿ ಹೊಡೆಸಿಕೊಳ್ಳುವ ಮೂಲಕ ವಿಶೇಷ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ, ತಾಲ್ಲೂಕಿನ ಮಳೂರುಪಟ್ಟಣದಲ್ಲಿ ತಡರಾತ್ರಿ ನಡೆದ ಕರಗಮಹೋತ್ಸವದಲ್ಲಿ, ಶಕ್ತಿದೇವತೆಗಳಾದ ದುರ್ಗಾ ಪರಮೇಶ್ವರಿ ಹಾಗೂ ಚಾಮುಂಡೇಶ್ವರಿ ಹೆಸರಿನಲ್ಲಿ ತಲೆಗೆ ಕಾಯಿ ಹೊಡೆದುಕೊಂಡು ದೇವಿಗೆ ಭಕ್ತಿ ಅರ್ಪಿಸಲಾಯ್ತು. ಸಾವಿರಾರು ಭಕ್ತರು ಈ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು.