‘ಕನ್ನಡ ಶಾಲೆ ಉಳಿಯಬೇಕೆಂಬ ಉದ್ದೇಶದಿಂದಲೇ ಸ.ಹಿ.ಪ್ರಾ ಸಿನಿಮಾ ಮಾಡಿದ್ದು’

ಮೈಸೂರು: ದಸರಾ ಚಲನಚಿತ್ರೋತ್ಸವದ ಉದ್ಘಾಟನೆಯಲ್ಲಿ ಕಿರಿಕ್​ ಪಾರ್ಟಿ ಖ್ಯಾತಿಯ ರಿಷಬ್​ ಶೆಟ್ಟಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಬಾಲ್ಯದ ದಸರಾ ಹಬ್ಬವನ್ನು ನೆನೆಪಿಸಿಕೊಂಡರರು. ಬಳಿಕ, ಸರ್ಕಾರಿ, ಕನ್ನಡ ಶಾಲೆ ಉಳಿಯಬೇಕು. ಅದೇ ಉದ್ದೇಶದಿಂದ ನಾನು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಮಾಡಿದ್ದು. ಈ ಸಿನಿಮಾವನ್ನು ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ತೋರಿಸಬೇಕು ಅನ್ನೋ ಆಸೆ ಇದೆ. ಅದಕ್ಕಾಗಿ ತುಂಬಾ ಕಷ್ಟ ಪಟ್ಟೆ ಆದರೂ ಸಾಧ್ಯವಾಗಲಿಲ್ಲ. ಮುಂದೊಂದು ದಿನ ಅವರುಗಳಿಗೆ ತೋರಿಸುತ್ತೇನೆ ಅಂತಾ ಹೇಳಿದರು.

ಸಿನಿಮಾ ಮಾಡೋದು ಬಾಕ್ಸ್ ಆಫೀಸ್ ಕಲೆಕ್ಷನ್ ಉದ್ದೇಶಕ್ಕೆ ಸೀಮಿತವಾಗಬಾರದು. ನನ್ನ ಸಿನಿಮಾ ನೋಡಿ ಮುಚ್ಚುತ್ತಿದ್ದ ಶಾಲೆಗೆ ಶಿಕ್ಷಕರು ನೇಮಕವಾಗಿದ್ದಾರೆ. ಅದೇ ನನಗೆ ಖುಷಿ. ಈಗಾಗಲೇ ಆ ಶಾಲೆ ದತ್ತು ಪಡೆದಿದ್ದೇನೆ. ಆ ಶಾಲೆಯನ್ನು ಉಳಿಸೋ ಕೆಲಸ ಮಾಡ್ತೀನಿ ಅಂತಾ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv