ವಿಜಯ್‌ ದೇವರಕೊಂಡ ಜೊತೆ ದಿಗಂತ್ ರೇಸ್..!

ನಟ ದೂದ್‌ಪೇಡಾ ದಿಗಂತ್ ದಶಕದ ನಂತ್ರ ಮತ್ತೆ ಟಾಲಿವುಡ್‌ಗೆ ಹಾರಿದ್ದಾರೆ. ಈ ಬಾರಿ ಅವ್ರು ತೆರೆಮೇಲೆ ತೆಲುಗಿನ ಫೇಮಸ್ ನಟ ವಿಜಯ್‌ದೇವರಕೊಂಡ ಜೊತೆ ಸ್ಕ್ರೀನಿ ಶೇರ್ ಮಾಡ್ತಿದ್ದಾರೆ. ಹೌದು, 2008ರಲ್ಲಿ ತೆರೆಕಂಡ ಕನ್ನಡದ ಹಿಟ್ ಸಿನಿಮಾ ಮುಂಗಾರು ಮಳೆ, ತೆಲುಗು ರೀಮೆಕ್ ‘ವಾನ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದಿಗಂತ್ ಮತ್ತೆ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಈ ಹೊಸ ಚಿತ್ರದ ಟೈಟಲ್‌ ಸೇರಿದಂತೆ ಹೆಚ್ಚಿನ ವಿವರಗಳು ಇನ್ನೂ ತಿಳಿದುಬರಬೇಕಿದೆ. ಆದ್ರೆ, ಈ ಸಿನಿಮಾದಲ್ಲಿ ದಿಗಂತ್‌ ಬೈಕ್‌ ಬಗ್ಗೆ ಅತೀವ ಆಸಕ್ತಿ ಹೊಂದಿರುವಂತೆ ತೋರಿಸಲಿದ್ದಾರಂತೆ. ಹೀಗಾಗಿ ಅವರು ಬೈಕ್‌ ರೇಸರ್ ಆಗಿ ಕಾಣಿಸಿಕೊಳ್ಳೋ ಸಾಧ್ಯತೆಯಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಾಲಿನಿ ಪಾಂಡೆ ಹಾಗೂ ಮಾಳವಳಿಕಾ ಮೋಹನ್ ಹಿರೋಯಿನ್‌ಗಳಾಗಿದ್ದು, ಬಹುಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಮುಂದಿನ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ಬಾಲಿವುಡ್, ಟಾಲಿವುಡ್‌, ಸ್ಯಾಂಡಲ್ವುಡ್‌ನಲ್ಲಿ ದಿಗ್ಗಿ ಬ್ಯುಸಿ!
ಇನ್ನೊಂದೆಡೆ, ಕನ್ನಡದಲ್ಲಿ ಟಿ ಆರ್ ಚಂದ್ರಶೇಖರ್ ನಿರ್ಮಾಣದ ಹುಟ್ಟುಹಬ್ಬದ ಶುಭಾಶಯಗಳು ಚಿತ್ರಕ್ಕೆ ದಿಗಂತ್ ಸಹಿ ಹಾಕಿದ್ದು ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿತ್ತು. ಈ ಥ್ರಿಲ್ಲರ್ ಸಿನಿಮಾದ ಚಿತ್ರೀಕರಣ ಕೂಡ ಮೇ ಮೊದಲ ವಾರದಿಂದ ಆರಂಭಗೊಳ್ಳಲಿದೆ. ಈ ನಡುವೆ ಬಾಲಿವುಡ್‌ನಲ್ಲಿ ರಾಮಾಯಣ ಕಥೆಯಾಧಾರಿಸಿದ ರಾಮ್‌ಯುಗ್ ಚಿತ್ರದಲ್ಲಿ ದಿಗಂತ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆಗಸ್ಟ್‌ನಲ್ಲಿ ರಿಲೀಸ್ ಆಗೋ ಪ್ಲಾನ್ ಇದೆ.