ಜೈಲಿನಿಂದ ಶಾಸಕ ಕಂಪ್ಲಿ ಗಣೇಶ್ ಬಿಡುಗಡೆ

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶಾಸಕ‌ ಗಣೇಶ್ ಜೈಲು ಪಾಲಾಗಿದ್ದರು. ಅವರಿಗೆ ನಿನ್ನೆ ಹೈಕೋರ್ಟ್​ ಷರತ್ತು ಬದ್ದ ಜಾಮೀನು ಮಂಜೂರು ಮಾಡಿತ್ತು. ಇಂದು ಕಾನೂನು ಪ್ರಕಾರ ನಿಯಮಗಳಂತೆ ವೈದ್ಯಕೀಯ ಪರೀಕ್ಷೆ ನಂತರ ಅವರನ್ನ ಬಿಡುಗಡೆ ಮಾಡಲಾಗಿದೆ. ಕಂಪ್ಲಿ ಗಣೇಶ್ ಬಿಡುಗಡೆಯಾದ ವಿಚಾರ ತಿಳಿದು, ಕಂಪ್ಲಿ  ಕ್ಷೇತ್ರದಿಂದ ಅವರ ನೂರಾರು ಅಭಿಮಾನಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಶಾಸಕ‌ ಗಣೇಶ್ ಅನ್ನ ಕರೆದೊಯ್ದರು. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಶಾಸಕ‌ ಗಣೇಶ್ ತಮ್ಮ ಮನೆ ದೇವರಾದ ಹುಲಿಯಮ್ಮ ದೇವರ ಅಂಗಳಕ್ಕೆ ಹೋಗಿ ಪೂಜೆ ಮಾಡಿಸಲಿದ್ದಾರೆ ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv