ಸೇನೆ ಅನ್ನೋದೇ ಓಲ್ಡ್​ ಫ್ಯಾಶನ್, ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಏಕೆ ಭಯ?-ಕಮಲ್ ಕಿಡಿ

ನವದೆಹಲಿ: ಮಕ್ಕಳ್​​ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥ, ನಟ ಕಮಲ್​ ಹಾಸನ್​​​ ಕಾಶ್ಮೀರದ ವಿಚಾರವಾಗಿ ನೀಡಿದ ಹೇಳಿಕೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಮಲ್​ ಹಾಸನ್​​, ಕಾಶ್ಮೀರ ವಿಚಾರವಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಸರ್ಕಾರ ಯಾಕೆ ಭಯಪಡ್ತಿದೆ? ಎಂದು ಕೇಳಿದ್ರು. ಭಾರತ ಉತ್ತಮವಾದ ರಾಷ್ಟ್ರ ಎಂದು ಪ್ರೂವ್​ ಮಾಡಬೇಕಾದ್ರೆ ಈ ರೀತಿ ವರ್ತಿಸಬಾರದು ಎಂದು ಕಿವಿ ಮಾತು ಕೂಡ ಹೇಳಿದ್ರು.

ಸೈನಿಕರು ಸಾಯಲೆಂದೇ ಕಾಶ್ಮೀರಕ್ಕೆ ಹೋಗ್ತಾರೆ ಅಂತ ಜನ ಹೇಳೋದನ್ನ ಕೇಳೋಕೆ ನನಗೆ ಬೇಸರವಾಗುತ್ತೆ. ಸೇನೆ ಅನ್ನೋದೇ ಓಲ್ಡ್​ ಫ್ಯಾಶನ್​​​​​​​. ಜಗತ್ತು ಹೇಗೆ ಬದಲಾಯಿತು ಗೊತ್ತಲ್ವಾ. ನಾವು ಮನುಷ್ಯರು ಆಹಾರಕ್ಕಾಗಿ ಒಬ್ಬರನ್ನೊಬ್ಬರು ಕೊಲ್ಲುವುದಿಲ್ಲ ಅಂತ ನಿರ್ಧಾರ ಮಾಡಿದೆವು. ಅದರಂತೆ ಯುದ್ಧ ನಿಲ್ಲಿಸೋ ಸಮಯ ಕೂಡ ಬರುತ್ತೆ. ಕಳೆದ 10 ವರ್ಷಗಳಲ್ಲಿ ಇದನ್ನು ಕಲಿತಿಲ್ವಾ ಎಂದು ಕೇಳಿದ್ರು?

ನಾನು ಮೈಯ್ಯಂ ಎಂಬ ಮ್ಯಾಗಜೀನ್​​​​ ನಡೆಸುತ್ತಿದ್ದಾಗ, ಕಾಶ್ಮೀರ ವಿವಾದದ ಬಗ್ಗೆ ಹಾಗೂ ಮುಂದೆ ಏನು ನಿರೀಕ್ಷಿಸಬಹುದು ಅನ್ನೋ ಬಗ್ಗೆ ಬರೆದಿದ್ದೆ. ನಾನು ಇವತ್ತು ಶೋಕಾಚರಣೆ ಮಾಡುತ್ತೇನೆ. ಯಾಕಂದ್ರೆ ಮುಂದೇನಾಗುತ್ತೆ ಅನ್ನೋದನ್ನ ನಾನು ಅವತ್ತು ಹೇಳಿದ್ದೆ. ಬಹುಶಃ ನಾನು ಅಂದು ಬೇರೆ ಏನನ್ನಾದ್ರೂ ಊಹಿಸಬೇಕಿತ್ತು ಎಂದರು. ಜನಾಭಿಪ್ರಾಯ ಸಂಗ್ರಹಿಸಿ, ಜನರಿಗೆ ಮಾತನಾಡುವಂತೆ ಕೇಳಿ. ಯಾಕಿನ್ನೂ ಇದನ್ನು ಮಾಡಿಲ್ಲ? ಅವರಿಗಿರೋ ಭಯವಾದ್ರೂ ಏನು? ದೇಶವನ್ನು ಒಡೆಯುವುದೇ ಅವರ ಉದ್ದೇಶ ಅಷ್ಟೇ ಎಂದು ಕಮಲ್​​ ಹಾಸನ್​ ಹೇಳಿದ್ರು. ಮತ್ತೊಮ್ಮೆ ನೀವ್ಯಾಕೆ ಕೇಳಬಾರದು? ಅವರು ಮಾಡಲ್ಲ ಅಂತಾರಾ? ಈಗ ಕಾಶ್ಮೀರ ಭಾರತಕ್ಕೆ ಸೇರಿದ್ದು, ಗಡಿ ಉದ್ದಕ್ಕೂ ಇದೇ ಪರಿಸ್ಥಿತಿ ಇದೆ ಅಂದ್ರು.

ಕಾಶ್ಮೀರದದಲ್ಲಿ ರೈಲುಗಳಲ್ಲಿ ಜಿಹಾದಿಗಳ ಫೋಟೋಗಳನ್ನ ಬಳಸಿ ಅವರನ್ನ ಹೀರೋಗಳಂತೆ ಬಿಂಬಿಸಲಾಗ್ತಿದೆ. ಇದೊಂದು ಮೂರ್ಖತನದ ಕೆಲಸ. ಭಾರತ ಕೂಡ ಅದೇ ರೀತಿಯ ಮೂರ್ಖತನದ ವರ್ತನೆ ತೋರುತ್ತಿದೆ. ಇದು ಸರಿಯಲ್ಲ. ಭಾರತ ಉತ್ತಮ ರಾಷ್ಟ್ರ ಎಂದು ತೋರಿಸಬೇಕಾದ್ರೆ ನಾವು ಈ ರೀತಿ ವರ್ತಿಸಬಾರದು. ಆಗ ಹೊಸ ರಾಜಕೀಯ ಶುರುವಾಗುತ್ತದೆ. ಹೊಸ ರಾಜಕೀಯ ಸಂಸ್ಕೃತಿ ಶುರುವಾಗುತ್ತದೆ ಎಂದು ಕಮಲ್ ಹಾಸನ್ ಹೇಳಿದ್ರು.