ಬೆಂಗಳೂರಿನಲ್ಲಿ ‘ಕಾಲ’ ಬಂದ್‌..ಮಂಗಳೂರಿನಲ್ಲಿ ರಿಲೀಸ್‌..!

ಮಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ತಮಿಳು ಚಿತ್ರ ಕಾಲ ರಿಲೀಸ್‌ ಆಗಿಲ್ಲ. ಕಾವೇರಿ ವಿಚಾರದ ಬಗ್ಗೆ ರಜಿನಿಕಾಂತ್‌ ನೀಡಿರುವ ಹೇಳಿಕೆ ಮುಂದಿಟ್ಟುಕೊಂಡು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಚಿತ್ರ ಬಿಡುಗಡೆಯಾಗದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಪರ ಸಂಘಟನೆಗಳ ಮನವಿಗೆ ಮಲ್ಟಿಫ್ಲೆಕ್ಸ್‌ ಹಾಗೂ ಸಿಂಗಲ್ ಥಿಯೇಟರ್‌ ಮಾಲೀಕರು ಸ್ಪಂದಿಸಿ ಚಿತ್ರ ರಿಲೀಸ್ ಮಾಡಿಲ್ಲ. ಆದ್ರೆ, ಮಂಗಳೂರಿನಲ್ಲಿ ಮಾತ್ರ ‘ಕಾಲ’ನ ಆರ್ಭಟಕ್ಕೆ ಯಾವುದೇ ಅಡ್ಡಿ ಎದುರಾಗಿಲ್ಲ. ನ‌ಗರದ ಬಿಗ್ ಸಿನಿಮಾಸ್​ನಲ್ಲಿ ಮಧ್ಯಾಹ್ನ 12.30ರ ಶೋನಲ್ಲಿ ಕಾಲ ಚಿತ್ರ ಬಿಡುಗಡೆಗೊಳ್ಳಬೇಕಿತ್ತು. 01: 00 ಗಂಟೆಗೆ  ಚಿತ್ರ ರಿಲೀಸ್ ಆಗಿದೆ. ಯಾವುದೇ ಅಡ್ಡಿ ಆತಂಕವಿಲ್ಲದೇ ಚಿತ್ರ ಪ್ರದರ್ಶನ ಕಾಣುತ್ತಿದೆ.​  ಅಲ್ಲದೇ, ನಗರದ ಭಾರತ್ ಮಾಲ್​ನ ಬಿಗ್ ಸಿನಿಮಾ ಮತ್ತು ಪೋರಂ ಮಾಲ್​ನ ಪಿವಿಆರ್ ಸಿನಿಮಾದಲ್ಲಿ ಕಾಲಾ ಪ್ರದರ್ಶನ ಕಾಣಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಮಂದಿರದ ಹೊರಗಡೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv