ಮೈಸೂರಿನಲ್ಲಿ ಶುರುವಾಯ್ತು ‘ಕಾಲ’

ಮೈಸೂರು: ರಜನಿಕಾಂತ್​ ಅಭಿನಯದ ಕಾಲಾ ಚಿತ್ರ ಬಿಡುಗಡೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಲಾ ಚಿತ್ರ ಪ್ರದರ್ಶನ ಮಾಡದಂತೆ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದ್ರೆ ಮಧ್ಯಾಹ್ನದ ವೇಳೆಗೆ ನಗರದ ಎರಡು ಮಲ್ಟಿಫೆಕ್ಸ್‌ನಲ್ಲಿ ಮ್ಯಾಟಿನಿ‌ ಶೋ ಮೂಲಕ ‘ಕಾಲಾ’ ನ ಅರ್ಭಟ ಶುರುವಾಗಿದೆ. ಡಿಆರ್‌‌ಸಿ ಹಾಗೂ ಐನೆಕ್ಸ್​ನಲ್ಲಿ ಚಿತ್ರ ಪ್ರದರ್ಶನ ಶುರುವಾಗಿದೆ. ಮಲ್ಟಿಫೆಕ್ಸ್ ಹೊರಗೂ-ಒಳಗೂ ಪೊಲೀಸರ ಬಿಗಿ ಭದ್ರತೆಯ ಮಧ್ಯೆ ಚಿತ್ರ ಪ್ರದರ್ಶನಗೊಂಡಿತು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv