B.E ಸ್ಟೂಡೆಂಟ್ಸ್ ಸಂಕಟ ನಿವಾರಿಸಿದ ವಸಿಷ್ಠ M2 ಸಾಂಗ್‌..!

ಧಮ್‌ ಹೊಡ್ರೆ ಕಿಕ್ಕೂ, ಎಣ್ಣೆ ಹೊಡ್ರೆ ಕಿಕ್ಕೂ ಅಂತ ಸಿನಿಮಾಗಳಲ್ಲಿ, ಎಣ್ಣೆ- ಧಮ್ಮೂ ಹಾಡುಗಳನ್ನ ಮಾಡಿದ್ದಾರೆ. ಎಲ್ಲಾ ಚಟಗಳ ಕುರಿತು ಹಾಡುಗಳನ್ನ ಮಾಡಿದ್ದಾರೆ. ನೆಗೆಟೀವ್‌ ಬೇಗ ಅಟ್ರ್ಯಾಕ್ಟ್‌ ಆಗುತ್ತೆ ಅನ್ನೋ ಸೂತ್ರದಲ್ಲಿ ಕಮರ್ಷಿಯಲ್‌ ಎಲಿಮೆಂಟ್‌ ಅಂತ ಸಿನಿಮಾಗಳಲ್ಲಿ ಇಂತಹ ಹಾಡುಗಳನ್ನ ಮಾಡಿದ್ದಾರೆ. ಅವು ಫೇಮಸ್ಸೂ ಆಗಿವೆ. ಆದ್ರೆ ಆ ಹಾಡುಗಳಿಂದ ಮೇಕರ್‌ಗಳಿಗೆ ಬಿಟ್ರೆ, ಕೇಳಿದವರಿಗೂ ನೋಡಿದವರಿಗೂ ಆಕ್ಷಣದ ಎಂಟ್ರಟೈನ್ಮೆಂಟ್‌ ಬಿಟ್ರೆ, ಬೇರೇನು ಸಿಕ್ಕಿಲ್ಲ. ಸೋ ಇಂತಹವರ ಮಧ್ಯ ಇಲ್ಲೊಂದು ತಂಡ ನಾವು ಪಾಸೀಟೀವ್‌ ಆಗಿ ಸಾಂಗ್‌ ಮಾಡ್ತೀನಿ,ಅದು ಕಮರ್ಷಿಯಲ್ಲಾಗಿ, ಆ ಹಾಡು ಮಜಾನೂ ಕೂಡುತ್ತೆ, ಉಪಯೋಗನೂ ಆಗುತ್ತೆ. ಅಂತ ಇಂಜಿನಿಯರ್‌ ವಿದ್ಯಾರ್ಥಿಗಳಿಗಾಗಿ ಎಮ್‌2 ಫಾರ್ಮ್ಯೂಲಾ ಹಾಡನ್ನ ಮಾಡಿದೆ.
ವಸಿಷ್ಠ ಹಾಡಿದ್ರು.. ಬಿಇ ಸ್ಟುಡೆಂಟ್ಸ್‌ ಫಿದಾ ಆದ್ರು..!
ಪ್ರತಿಯೊಬ್ಬ ಇಂಜಿನಿಯರ್‌ ಸ್ಟೂಡೆಂಟ್‌ಗೆ ಅತಿ ಕಠಿಣವಾದ ಸಬ್ಜೆಕ್ಟ್ ಅಂದ್ರೆ, ಅದು M2. ಸಿಕ್ಕಾಪಟ್ಟೆ ಸೂತ್ರಗಳಿರೋ ಈ ಸಬ್ಜೆಕ್ಟ್‌ನಲ್ಲಿ ಪ್ರತಿ ವರ್ಷ ಅತಿ ಹೆಚ್ಚು ವಿದ್ಯಾರ್ಥಿಗಳು ಫೇಲ್‌ ಆಗ್ತಾರೆ. ಇದನ್ನ ಗಮನಿಸಿ ಬಹುಮುಖ ಪ್ರತಿಭೆ ಪ್ರದೀಪ್‌ ದೊಡ್ಡಯ್ಯ ಈ ಹಾಡನ್ನ ಮಾಡಿದ್ದಾರೆ. ಪ್ರದೀಪ್‌ ದೊಡ್ಡಯ್ಯ ಕಾನ್ಸೆಪ್ಟ್‌ಗೆ ನಟ ವಸಿಷ್ಠ ಮತ್ತು ಕಾಲಚಕ್ರ ಚಿತ್ರತಂಡ ಹಾಗೂ ಆನಂದ್‌ ಆಡಿಯೋ ಕಂಪನಿ ಸಾಥ್‌ ಕೊಟ್ಟಿದೆ. ಕಾಲಚಕ್ರ ಚಿತ್ರದ ನಿರ್ಮಾಪಕ, ನಿರ್ದೇಶಕ ಸುಮಂತ್‌ ಕ್ರಾಂತಿ ಈ ಹಾಡನ್ನ ನಿರ್ಮಿಸಿದ್ದು, ಇದನ್ನ ಸಿನಿಮಾ ಪ್ರಮೋಶಿನಲ್‌ ಹಾಡು ಅಂತ್ಲೇ ರಿಲೀಸ್‌ ಮಾಡಿದ್ದಾರೆ. ವಸಿಷ್ಠ ಸಿಂಹ ಓ ಗಾಡ್‌ ನಂಗ್‌ ಇಂಜಿನಿಯರ್‌ ಆಗೋ ಡ್ರೀಮೂ… ಅನ್ನೋ ಕ್ಯಾಚಿ ಲಿರಿಕ್ಸ್‌ನ ಹಾಡಿದ್ದಾರೆ. ಇವ್ರಿಗೆ ವಂದಿತಾ ನಾರಾಯಣ್‌, ಸಿದ್ದಾರ್ಥ್‌ ಸುರೇಶ್‌,ಸಂಜಯ್‌, ಸಚಿನ್‌ ಸಾಥ್‌ ಕೊಟ್ಟಿದ್ದಾರೆ. ಪ್ರದೀಪ್‌ ದೊಡ್ಡಯ್ಯ, ಡಾ. ಹರೀಶ್‌ ಬಾಬು,ಸಂತೋಷ್‌ ನಾಯ್ಕ್‌ ಸಾಹಿತ್ಯ ಬರೆದಿದ್ದು, ಸಿದ್ದಾರ್ಥ್‌ ಸುರೇಶ್‌, ಶ್ರೇಯಸ್‌ ಆರ್‌.ಎಸ್‌ ಸಂಗೀತ ಸಂಯೋಜಿಸಿದ್ದಾರೆ.

ಅಂದ್ಹಾಗೆ ವಸಿಷ್ಠ ಹಾಡೋದ್ರ ಜೊತೆಗೆ ವಿಡಿಯೋ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಹಾಡಲ್ಲಿ, ಪ್ರದೀಪ್‌, ಪ್ರಿಯಾಂಕ, ಪೂಜಾ, ವಂದಿತಾ, ಬಿ.ಕೆ ಶೆಟ್ಟಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಸದ್ಯ ಈ ಎಮ್‌2 ವಿಡಿಯೋ ಹಾಡನ್ನ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಇಂಜಿನಿಯರಿಂಗ್ ಸ್ಟುಡೆಂಟ್ಸ್‌ಗಳಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ತಿದೆ. ಅಂದ್ಹಾಗೆ ಈ ಹಾಡು ಕನ್ನಡ ಮತ್ತು ಇಂಗ್ಲೀಷ್‌ ಮಿಕ್ಸ್‌ ಆಗಿದ್ದು, ಈ ಹಾಡನ್ನ ಆಲ್‌ ಓವರ್‌ ಇಂಡಿಯಾ ಯಾವ ಇಂಜಿನಿಯರಿಂಗ್‌ ಸ್ಟುಡೆಂಟ್‌ ಬೇಕಾದ್ರೂ ಕೇಳಬಹುದಾಗಿದೆ. ಈಗಾಗ್ಲೇ ಈ ಹಾಡು ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಮೊಬೈಲ್‌ಗಳಲ್ಲಿ ರಿಂಗಣಿಸ್ತಿದ್ದು, ಅನ್‌ಲೈನ್‌ನಲ್ಲೂ ಸಖತ್ ವೈರಲ್‌ ಆಗ್ತಿದೆ.