ರಜನಿಕಾಂತ್ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ

ರಾಯಚೂರು: ಸೂಪರ್‌ಸ್ಟಾರ್ ರಜನಿಕಾಂತ್​​​ ಅಭಿನಯದ ಕಾಲಾ ಚಿತ್ರ ಬಿಸಿಲುನಾಡು ರಾಯಚೂರಿನಲ್ಲಿ ಪ್ರದರ್ಶನಗೊಳ್ಳುತ್ತಿಲ್ಲ. ನಗರದ ಪದ್ಮನಾಭ ಚಿತ್ರಮಂದಿರದಲ್ಲಿ ಮುಂಜಾನೆ 10.30ಕ್ಕೆ ಆರಂಭವಾಗಬೇಕಿದ್ದ ಚಿತ್ರ, ಕನ್ನಡ ಪರ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಪ್ರದರ್ಶನಗೊಳ್ಳುತ್ತಿಲ್ಲ. ಕಾಲಾ ಚಿತ್ರ ಪ್ರದರ್ಶನಕ್ಕೆ ಸಿದ್ಧವಾಗಿ, ಸಿಬ್ಬಂದಿ ಟಿಕೆಟ್​ ನೀಡಿದ್ದರು. ಆದ್ರೆ, ಗಲಾಟೆ ಆಗಬಹುದು ಅನ್ನೋ ಕಾರಣಕ್ಕೆ ಚಿತ್ರ ಪ್ರದರ್ಶನ ರದ್ದು ಮಾಡಿ, ಟಿಕೆಟ್​ ವಾಪಸ್​ ಪಡೆದು ಹಣ ನೀಡಿದ್ದಾರೆ. ಇದರಿಂದಾಗಿ ಅಭಿಮಾನಿಗಳು ನಿರಾಸೆಯಿಂದ ವಾಪಾಸ್​ ತೆರಳಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್​ ಬಂದೋಬಸ್ತ್​​ನ್ನು ಏರ್ಪಡಿಸಲಾಗಿದೆ.
ಪೋಸ್ಟರ್ ಹರಿದು ಹಾಕಿ ಧಿಕ್ಕಾರ
ಸಿಂಧನೂರು ಪಟ್ಟಣದ ಸಂಗಮೇಶ್ವರ ಟಾಕೀಸ್​​​ನಲ್ಲಿ ಕಾಲಾ ಚಿತ್ರ ಪ್ರದರ್ಶನ ರದ್ದು ಮಾಡಲಾಗಿದೆ. ಕನ್ನಡಪರ ಸಂಘಟನೆಯ ಕಾರ್ಯಕರ್ತರು ಕಾಲಾ ಚಿತ್ರದ ಪೋಸ್ಟರ್ ಹರಿದು ಹಾಕಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೂಪರ್ ಸ್ಟಾರ್ ರಜನಿಕಾಂತ್ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಮಾನ್ವಿಯಲ್ಲೂ ಕಾಲಾ ಚಿತ್ರ ಪ್ರದರ್ಶನ ರದ್ದುಗೊಂಡಿದೆ. ಪಟ್ಟಣದ ಶ್ರೀ ಅಪರ್ಣಾ ಚಿತ್ರಮಂದಿರದಲ್ಲಿ ಕಾಲಾ ಪ್ರದರ್ಶನ ರದ್ದು ಮಾಡಲಾಗಿದೆ. ಥಿಯೇಟರ್ ಮಾಲೀಕರು ಸ್ವಯಂ ಪ್ರೇರಿತವಾಗಿ ಕಾಲ ಚಿತ್ರ ಪ್ರದರ್ಶನ ರದ್ದು ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv