ಗಣಿನಾಡಲ್ಲಿ ‘ಕಾಲಾ’ಗೆ ಕಂಟಕ ಇಲ್ಲ : ಬಿಗಿ ಬಂದೋಬಸ್ತ್​​ನಲ್ಲಿ ಚಿತ್ರ ಪ್ರದರ್ಶನ

ಬಳ್ಳಾರಿ: ವಿರೋಧದ ನಡುವೆಯೂ ಗಣಿನಾಡು ಬಳ್ಳಾರಿಯಲ್ಲಿ ಕಾಲಾ ಚಿತ್ರ ಪ್ರದರ್ಶನ ಪ್ರಾರಂಭವಾಗಿದೆ. ಪೊಲೀಸರ ಸಮ್ಮುಖದಲ್ಲಿ ನಗರದ ರಾಧಿಕಾ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆಯುತ್ತಿದೆ. ತೆರೆ ಮೇಲೆ ತಮ್ಮ ನೆಚ್ಚಿನ ನಾಯಕನನ್ನು ನೋಡಿ ಅಭಿಮಾನಿಗಳು ಕೇಕೆ ಹಾಕಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ, ಕನ್ನಡ ಪರ ಹೋರಾಟಗಾರರ ಬಂಧಿಸಲಾಯಿತು. ಹೋರಾಟಗಾರರನ್ನು ಬ್ರೂಸ್​​ಪೇಟೆ ಪೊಲೀಸರು ಬಂಧಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv