ವಿರೋಧದ ನಡುವೆಯೂ ಕಾರಟಗಿಯಲ್ಲಿ ಕಾಲಾ ಪ್ರದರ್ಶನ

ಕೊಪ್ಪಳ: ಕಾವೇರಿ ನದಿ ನೀರು ಹಂಚಿಕೆ ಕುರಿತಾದ ನಟ ರಜನಿಕಾಂತ್​ ಹೇಳಿಕೆ ಹಿನ್ನೆಲೆಯಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಚಿತ್ರ ಪ್ರದರ್ಶಿಸದಂತೆ ಚಿತ್ರ ಮಂದಿರದ ಮಾಲೀಕರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಕೊಪ್ಪಳದಲ್ಲಿ ಕನ್ನಡಪರ ಸಂಘಟನೆಗಳ ಮನವಿಗೆ ಕೆಲ ಚಿತ್ರಮಂದಿರ ಮಾಲೀಕರಿಂದ ಸ್ಪಂದಿಸಿದ್ದಾರೆ. ಕೊಪ್ಪಳ, ಗಂಗಾವತಿ, ಕುಷ್ಟಗಿಯಲ್ಲಿ ಚಿತ್ರ ಪ್ರದರ್ಶವನ್ನು ಸ್ಥಗಿತಗೊಳಿಸಿದ್ದಾರೆ. ಆದರೆ ಇದರ ನಡುವೆಯೂ ಕಾರಟಗಿಯ ಲಕ್ಷ್ಮಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನವನ್ನು ಆರಂಭಿಸಲಾಗಿತ್ತು. ಈ ವೇಳೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚಿತ್ರ ಮಂದಿರದ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕಾರ್ಯಕರ್ತರು ಚಿತ್ರ ಸ್ಥಗಿತಗೊಳಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಚಿತ್ರಮಂದಿರದ ಸುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv