ರೆಕ್ಸ್ ಥೀಯೆಟರ್ ನಲ್ಲಿ ಕಾಲ ಚಿತ್ರದ ಮೊದಲ ಪ್ರದರ್ಶನ

ಬೆಂಗಳೂರು: ತೀವ್ರ ವಿರೋಧದ ನಡುವೆಯೂ ಇಂದೂ ಕೂಡ ನಗರದಲ್ಲಿ ರಜನಿಕಾಂತ್ ಅಭಿನಯದ ಕಾಲ ಚಿತ್ರ ಪ್ರದರ್ಶನಗೊಳ್ತಿದೆ. ನಗರದ ಪ್ರಮುಖ ಸಿನಿಮಾ ಮಂದಿರಗಳಲ್ಲಿ ಕಾಲ ಪ್ರದರ್ಶನಗೊಳ್ತಿದೆ. ಕಾಲ ಚಿತ್ರವನ್ನು ಕಣ್ತುಂಬಿಕೊಳ್ಳಲು ರಜನಿ ಅಭಿಮಾನಿಗಳು ಥಿಯೇತರ್ ​ಗೆ ಬೆಳ್ಳಂಬೆಳಗ್ಗೆಯೇ ದೌಡಾಯಿಸಿದ್ದಾರೆ.
ನಟ ರಜನಿಕಾಂತ್ ನಟಿಸಿರುವ ಕಾಲ ಸಿನಿಮಾ ಇಂದು ಬ್ರಿಗೇಡ್ ರೋಡ್ ನ ಬಳಿಯಿರುವ ರೆಕ್ಸ್ ಥಿಯೇಟರ್ ನಲ್ಲಿ ಕಬಾಲಿ ಪ್ರದರ್ಶನ ಕಂಡಿತು. ನೆನ್ನೆ ನಡೆದ ಪ್ರತಿಭಟನೆಯಿಂದ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಶೋಗಳನ್ನು ಮುಂದೂಡಲಾಗಿತ್ತು. ಇಂದು ಹಲವೆಡೆ ಕಾಲ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಸಿನಿಮಾ ನೋಡಲು ಕಾತುರದಿಂದ ಅಭಿಮಾನಿಗಳು ಥಿಯೇಟರ ಬಳಿ ಕಾಯುತ್ತಿದ್ದಾರೆ. ಈಗಾಗಲೇ ಎಲ್ಲ ಶೋಗಳ ಟಿಕೆಟ್ಗಳು ಮಾರಾಟವಾಗಿವೆ.
ರಾಜ್ಯದಲ್ಲಿ ಕಾಲಾ ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ ಭೂಮಿಕಾ‌ ಥಿಯೇಟರ್‌ನಲ್ಲಿ ಕಾಲಾ ಪೋಸ್ಟರ್ ಗಳು ರಾರಾಜಿಸುತ್ತವೆ. ಭೂಮಿಕಾ ಚಿತ್ರಮಂದಿರದಲ್ಲಿ ಬೆಳಗ್ಗೆ ಚಿತ್ರ 10.30ಕ್ಕೆ ಪ್ರದರ್ಶನವಾಗಲಿದೆ.
ಮಂತ್ರಿ ಮಾಲ್ ನಲ್ಲಿ ಬಿಗಿ ಪೊಲೀಸ್ ಬಂದೊ ಬಸ್ತ್ ನಡುವೆ ಕಾಲ ಚಿತ್ರದ ಪ್ರದರ್ಶನ ನಡೆಯಲಿದೆ . ಬೆಳಿಗ್ಗೆ ೯.೧೫ ಕ್ಕೆ ಕಾಲ ಚಿತ್ರದ ಪ್ರದರ್ಶನ ಆರಂಭವಗಲಿದೆ , ನಿನ್ನೆ ಕೂಡ ಚಿತ್ರ ಪ್ರದರ್ಶನವಾಗಿತ್ತು. ಕನ್ನಡ ಪರ ಹೋರಾಟಗಾರರ ಮುತ್ತಿಗೆ ನಂತರ 8 ಗಂಟೆ ಮೇಲಿನ ಶೊ ಕ್ಯಾನ್ಸಲ್ ಮಾಡಿದ್ದ ಮಂತ್ರಿ ಮಾಲ್ ಆಡಳಿತ ಮಂಡಳಿ.ಇಂದು ಒಟ್ಟು 5 ಶೋಗಳ ಪ್ರದರ್ಶನ ನಡೆಯಲಿದೆ
ನಗರದ ಕೋರಮಂಗಲ್ಲದಲ್ಲಿರುವ ಬಾಲಾಜಿ ಥಿಯೇಟರ್ ನಲ್ಲಿ ಕಾಲ ಚಿತ್ರ ಪ್ರದರ್ಶನ ನಡೆಯಲಿದೆ ಬೆಳಗ್ಗೆ 10 ಗಂಟೆಯಿಂದಲೇ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಆಗಮಿಸಿದ್ದಾರೆ. ಇಂದು ಥಿಯೇಟರ್ ನಲ್ಲಿ ಒಟ್ಟು 5 ಆಟಗಳ ಪ್ರದರ್ಶನ ಏರ್ಪಡಿಸಲಾಗಿದೆ. ಥಿಯೇಟರ್ ಸುತ್ತ ಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ
‘ಕಾಲ’  ನೋಡಲು ಜನರ ಕೊರತೆ..!
ನಗರದ ನವರಂಗ್ ಥಿಯೇಟರ್ ನಲ್ಲಿ ಬೆಳಗ್ಗೆ 10.30ರ ಶೋ ನಿಲ್ಲಿಸಲಾಗಿದೆ, ಸಿನಿಮಾ ಪ್ರದರ್ಶನ ಇರುತ್ತೋ ಇಲ್ಲವೋ ಎಂದು ಪ್ರೇಕ್ಷಕರು ಗೊಂದಲದಲ್ಲಿರುವ ಕಾರಣ ಥೀಯೇಟರ ಗೆ ಪ್ರೇಕ್ಷಕರು ಬಾರದ ಕಾರಣ ಚಿತ್ರದ ಪ್ರದರ್ಶನ ನಿಲ್ಲಿಸಲಾಗಿದೆ, ಕಾಲಾ ಪ್ರದರ್ಶನ ಕಾಣ್ತಾ ಇದ್ದರೂ ಹಲವೆಡೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv