‘ಕಾಲಾ’ ಸಿನಿಮಾ ಪ್ರದರ್ಶನಕ್ಕೆ ಸಜ್ಜು

ದಾವಣಗೆರೆ: ಪೊಲೀಸ್ ಬಂದೋಬಸ್ತ್ ನಡುವೆ ನಗರದ ವಸಂತ ಚಿತ್ರಮಂದಿರದಲ್ಲಿ ಕಾಲಾ ಸಿನಿಮಾ ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ರಾಜ್ಯದಾದ್ಯಂತ ಕಾಲಾ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್​ ಬಿದ್ದಿತ್ತು. ಆದರೆ ಮ್ಯಾಟಿನಿ ಶೋ ವೇಳೆಗೆ ಕೆಲ ಚಿತ್ರಮಂದಿರ ಮಾಲೀಕರು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕನ್ನಡ ಪರ ಸಂಘಟನೆಗಳ ವಿರೋಧದ ನಡುವೆಯೂ, ನಗರದ ನಸಂತ ಚಿತ್ರಮಂದಿರದಲ್ಲಿ ಮಧ್ಯಾನದ ಶೋ ಪ್ರದರ್ಶಿಸಲು ತೀರ್ಮಾನಿಸಿರೋದಾಗಿ ಮಾಲೀಕ ಆಕಾಶ್​ ತಿಳಿಸಿದ್ದಾರೆ. ಚಿತ್ರಮಂದಿರದ ಮುಂಭಾಗ ಕಾಲಾ ಚಿತ್ರದ ಫೋಸ್ಟರ್ ಅಂಟಿಸಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಪ್ರೇಕ್ಷಕರು ಮಾತ್ರ ಚಿತ್ರಮಂದಿರದತ್ತ ಸುಳಿಯುತ್ತಿಲ್ಲ.