‘ಸಿದ್ದರಾಮಯ್ಯ ಆಪರೇಷನ್ ಜನಕ’ ಈಶ್ವರಪ್ಪ ವಾಗ್ದಾಳಿ

ಬೆಂಗಳೂರು: ಸಿದ್ದರಾಮಯ್ಯ ಆಪರೇಷನ್ ಜನಕ.. ಸಿದ್ದರಾಮಯ್ಯ ಯಾವಾಗ ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಹೋದರೋ ಆಗಲೇ ಆಪರೇಷನ್ ಆರಂಭ ಆಗಿದ್ದು ಅಂತಾ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿದವರು ಸಿದ್ದರಾಮಯ್ಯ. ಅವರಿಗೆ ಬಿಜೆಪಿ ಬಗ್ಗೆಯಾಗಲೀ, ಯಡಿಯೂರಪ್ಪನವರ ಬಗ್ಗೆಯಾಗಲಿ ಮಾತನಾಡುವ ನೈತಿಕತೆ ಇಲ್ಲ ಅಂತಾ ಹೇಳಿದರು.

ಇದೇ ವೇಳೆ, ಸರ್ಕಾರವನ್ನು ಬೀಳಿಸುವಂತಹ ಪ್ರಯತ್ನ ಅವರ ಪಕ್ಷದ ಶಾಸಕರೇ ಮಾಡ್ತಿದ್ದಾರೆ. ಆದರೆ ನಮ್ಮ ಮೇಲೆ ಆಪರೇಶನ್ ಕಮಲ ಆರೋಪ ಮಾಡ್ತಿದ್ದಾರೆ. ಈ ಸಮಯದಲ್ಲಿ ಆಡಿಯೊ ಬಿಡುಗಡೆ ಆಗಿದೆ. ಅದು ಸತ್ಯವೋ ಸುಳ್ಳೊ ತನಿಖೆ ಆಗಬೇಕು. ಆದ್ರೆ ತನಿಖೆ ಯಾರಿಂದ ಆಗಬೇಕು ಎನ್ನೋದು ಮುಖ್ಯ. ಕಳ್ಳನ ಕೈಗೆ ಬೀಗದ ಕೈ ಎಂದಿದ್ದಕ್ಕೆ ಆಡಳಿತ ಪಕ್ಷಕ್ಕೆ ಆಘಾತವಾಗಿರಬಹದು. ಈ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು. ಅದ್ರಲ್ಲೂ ಆದಷ್ಟು ಬೇಗ ತನಿಖೆ ಆಗಬೇಕು ಅಂತಾ ಈಶ್ವರಪ್ಪ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv