‘ಮಂಡ್ಯ, ಹಾಸನ,ತುಮಕೂರು ಕ್ಷೇತ್ರದಲ್ಲಿ ಮತದಾರರು ಜೆಡಿಎಸ್‌ಗೆ ಪಾಠ ಕಲಿಸುತ್ತಾರೆ’

ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ, ದೇವೇಗೌಡರು, ರೇವಣ್ಣ, ಭವಾನಿ ರೇವಣ್ಣನವರು ಕಣ್ಣೀರಿನ ಗುತ್ತಿಗೆ ತೆಗೆದುಕೊಂಡಿದ್ದಾರೆ. ರಾಜ್ಯದ ಜನ ಚುನಾವಣೆ ಮುಗಿದ ಬಳಿಕ ಕಣ್ಣೀರು ಹಾಕುವ ಹಾಗೇ ಮಾಡುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇವರು ರಾಜ್ಯದಲ್ಲಿ 22 ಸೀಟ್ ಗೆಲ್ಲುವುದು ಭ್ರಮೆ. ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಮತದಾರರು ಜೆಡಿಎಸ್‌ಗೆ ತಕ್ಕ ಪಾಠ ಕಲಿಸುತ್ತಾರೆ. ಈ ಹಿಂದೆ ದೇವೇಗೌಡರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಅಂದಿದ್ದರು. ಮೋದಿಯವರು ಪ್ರಧಾನಿಯಾದರು. ಈಗ ರೇವಣ್ಣ ಹೇಳುತ್ತಿದ್ದಾರೆ ಮೈತ್ರಿ ಪಕ್ಷದ 22 ಅಭ್ಯರ್ಥಿಗಳು ಗೆಲ್ಲುತ್ತಾರೆ. ಇಲ್ಲವಾದಲ್ಲಿ ರಾಜಕೀಯ ನಿವೃತಿ ತೆಗೆದುಕೊಳ್ಳುತ್ತೆೇನೆ ಎನ್ನುತ್ತಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ಬಿಜೆಪಿ ಪಕ್ಷ ರಾಷ್ಟ್ರೀಯವಾದಿ ಪಕ್ಷವಾಗಿದೆ. ಆದರೆ ಕಾಂಗ್ರೆಸ್ ಜೆಡಿಎಸ್ ಪಕ್ಷ ಜಾತಿವಾದಿ ಪಕ್ಷಗಳು. ಕಾಂಗ್ರೆಸ್ ನಾಯಕರುಗಳು ನಮ್ಮನ್ನು ಜಾತಿವಾದಿಗಳು ಎಂದು ಹೇಳುತ್ತಿದ್ದಾರೆ. ದೇವೇಗೌಡರು ಒಕಲಿಗರ ಪರ, ಸಿದ್ದರಾಮಯ್ಯ ಕುರುಬರ ಪರ, ಹಾಗೂ ಎಂ.ಬಿ ಪಾಟೀಲರು ಲಿಂಗಾಯತರ ಪರ ಇದ್ದಾರೆ ಅಂತಾ. ರಾಜ್ಯದ ಜನಕ್ಕೆ ಗೊತ್ತಾಗುತ್ತಿದೆ ಯಾರು ಜಾತಿವಾದಿಗಳು ಅಂತಾ. ಇದರ ಬಗ್ಗೆ ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv