ಸ್ಯಾಂಡಲ್​ವುಡ್​ ಸಹ ಕೇಳುತ್ತಿದೆ #JusticeForMadhu ಅಂತಾ..!

ಏಪ್ರಿಲ್ 13 ರಂದು ನಾಪತ್ತೆಯಾಗಿದ್ದ ರಾಯಚೂರಿನ ನವೋದಯ ಇಂಜಿನಿಯರಿಂಗ್​ ಕಾಲೇಜಿನ ವಿದಾರ್ಥಿನಿ ಮಧು ಪತ್ತಾರ ಶವವಾಗಿ ಪತ್ತೆಯಾಗಿದ್ದಾರೆ. ಕಾಲೇಜಿನಿಂದ ಸುಮಾರು 4 ಕಿಲೋಮೀಟರ್​ ದೂರದಲ್ಲಿ ಶವ ಪತ್ತೆಯಾಗಿದ್ದು, ನೆಲಕ್ಕೆ ತಾಗಿಕೊಂಡಂತೆ ನೇಣು ಬಿಗಿದ್ದಿದ್ದ ಮೃತದೇಹದಲ್ಲಿ ಸುಟ್ಟ ಗುರುತುಗಳೂ ಇವೆ. ಆದರೆ, ಸ್ಥಳದಲ್ಲಿ ಮಧು ಬರೆದಿದ್ದಾಳೆ ಎನ್ನಲಾದ ಡೆತ್​ನೋಟ್ ಕೂಡ ಸಿಕ್ಕಿತ್ತು. ಈ ಮಧ್ಯೆ ಮಧುಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಂದೆಡೆ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದಂತೆ ಮಧು ಅವರನ್ನ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಆಕೆಯ ಸಾವಿಗೆ ನ್ಯಾಯ ಒದಗಿಸಬೇಕು ಅಂತಾ ಇದೀಗ ಸೋಶಿಯಲ್​ ಮೀಡಿಯಾದಲ್ಲಿ #justiceformadhu ಅಭಿಯಾನ ನಡೆಯುತ್ತಿದೆ. ಈ ಅಭಿಯಾನಕ್ಕೆ ಈಗ ಸೆಲಬ್ರೆಟಿಗಳೂ ಸಾಥ್​ ನೀಡಿದ್ದಾರೆ. ಈ ಕುರಿತು ಸ್ಯಾಂಡಲ್​ವುಡ್​ ಸ್ಟಾರ್​ಗಳಾದ ನೀನಾಸಂ ಸತೀಶ್​, ಹರ್ಷಿಕಾ ಪೊಣಚ್ಚಾ, ರಶ್ಮಿಕಾ ಮಂದಣ್ಣ ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲದೇ ಫೇಮಸ್​ ಹ್ಯಾಕರ್​ ಅನ್ಶುಲ್​ ಸಕ್ಸೇನಾ ಟ್ವೀಟ್​ ಮಾಡಿ ನ್ಯಾಯ ಕೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಹರ್ಷಿಕಾ ಪೊಣಚ್ಚಾ, ‘ಆ ಅಮಾಯಕ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪೋಟೊಗಳನ್ನ ನೋಡಿದ್ರೆ ಹೃದಯ ಕಿವುಚಿದಂತಾಗುತ್ತೆ. ಅಪರಾಧಿಗೆ ತಕ್ಷಣವೇ ಶಿಕ್ಷೆ ನೀಡಬೇಕು’ ಅಂತಾ ಟ್ವೀಟ್​ ಮಾಡಿದ್ದಾರೆ.

ಇನ್ನು ನಟ ನಿನಾಸಂ ಸತೀಶ್​ ಟ್ವೀಟ್​ ಮಾಡಿ, ‘ಮನುಷ್ಯ ಕುಲವೇ ತಲೆ ತಗ್ಗಿಸುವಂಥ ಕೆಲಸ ಮಾಡಿದ ನೀಚರಿಗೆ ಸರಿಯಾದ ಶಿಕ್ಷೆ ಆಗಲಿ..ನ್ಯಾಯ ಸಿಗಲಿ ಮಧು ಅವರಿಗೆ’.. ಅಂತಾ ಟ್ವೀಟ್​ ಮಾಡಿದ್ದಾರೆ.

ಇನ್ನು ಈ ಕುರಿತು ರಶ್ಮಿಕಾ ಮಂದಣ್ಣ, ಮಾನವೀಯತೆ ಎಲ್ಲಿದೆ? ಮೂಲಗಳ ಪ್ರಕಾರ ರಾಯಚೂರು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ನಿಜವಾಗಿಯೂ ಇದು ನನಗೆ ನೋವು ತಂದಿದೆ.. ಈ ಹಿಂದೆಯೂ ಎಷ್ಟೋ ನಡೆದಿವೆ. ಮಧು ಸಾವಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನನಗಿದೆ.. ಇದು ಇಲ್ಲಿಗೇ ಕೊನೆಗೊಳ್ಳಬೇಕು ಅಂತಾ ಟ್ವೀಟ್​ ಮಾಡಿದ್ದಾರೆ.

ಇನ್ನು ಖ್ಯಾತ ಹ್ಯಾಕರ್ ಅನ್ಶುಲ್​ ಸಕ್ಸೇನಾ ಕೂಡ ಈ ಕುರಿತು ಸರಣಿ ಟ್ವೀಟ್​ಗಳನ್ನ ಮಾಡುತ್ತಲೇ ಬಂದಿದ್ದಾರೆ. #justiceformadhu ಅಂತಾ ಹ್ಯಾಷ್​ ಟ್ಯಾಗ್​ ಹಾಕಿ ಟ್ವೀಟ್​ ಮಾಡುತ್ತಲೇ ಇದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv