CJI ವಿರುದ್ಧ ಪಿತೂರಿ ಆರೋಪ: ನಿವೃತ್ತ ಜಸ್ಟೀಸ್​ ಎ.ಕೆ.ಪಾಟ್ನಾಯಕ್​​​ರಿಂದ ವಿಚಾರಣೆ

ನವದೆಹಲಿ: ಚೀಫ್ ಜಸ್ಟೀಸ್​ ರಂಜನ್ ಗೊಗೋಯ್ ವಿರುದ್ಧ ಪಿತೂರಿ ನಡೆಸಲಾಗಿದೆ ಅನ್ನೋ ಆರೋಪದ ವಿಚಾರಣೆಯನ್ನ ನಿವೃತ್ತ ಜಡ್ಜ್​​ ಎ.ಕೆ.ಪಾಟ್ನಾಯಕ್ ನಡೆಸುವಂತೆ ಸುಪ್ರೀಂಕೋರ್ಟ್ ಹೇಳಿದೆ. ವಕೀಲ ಉತ್ಸವ್ ಬೈನ್ಸ್​, ರಂಜನ್ ಗೊಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದಲ್ಲಿ ದೊಡ್ಡ ಷಡ್ಯಂತ್ರವೇ ನಡೆದಿದೆ ಅಂತಾ ಆರೋಪಿಸಿದ್ದರು. ಈ ಸಂಬಂಧ ನಿನ್ನೆ ಅಪೆಕ್ಸ್​ ಕೋರ್ಟ್​ ವಿಚಾರಣೆ ನಡೆಸಿದಾಗ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಮುಚ್ಚಿದ ಲಕೋಟೆಯಲ್ಲಿ ಕೆಲವು ಸಾಕ್ಷಿಗಳನ್ನ  ಅವರು ನೀಡಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ​ಅರುಣ್ ಮಿಶ್ರಾ, ಆರ್.​ಎಫ್​ ನಾರಿಮನ್ ಮತ್ತು ದೀಪಕ್ ಗುಪ್ತಾ ಅವರು ಸಿಬಿಐ ಮುಖ್ಯಸ್ಥರಿಗೆ, ಗುಪ್ತಚರ ಇಲಾಖೆ ಮುಖ್ಯಸ್ಥರಿಗೆ ಹಾಗೂ ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದರು. ಇಂದು ಕೂಡ ಅದರ ವಿಚಾರಣೆ ಮುಂದುವರಿಯಿತು. ಈ ವೇಳೆ ವಕೀಲರು ನಾನು ಮಾಡಿರುವ ಆರೋಪದಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂತಾ ಹೇಳಿದರು. ನಂತರ ಕೋರ್ಟ್​, ಇದರ ವಿಚಾರಣೆಯನ್ನ ನಿವೃತ್ತ ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್ ನಡೆಸುವಂತೆ ಸೂಚನೆ ನೀಡಿದೆ.

ವಿಚಾರಣೆಯಿಂದ ಹಿಂದೆ ಸರಿದ ಜಸ್ಟೀಸ್​ ಎನ್​ವಿ ರಮಣ್

ಜಸ್ಟೀಸ್​ ಎನ್​ವಿ ರಮಣ್

ಇತ್ತ, ಜಸ್ಟೀಸ್​ ಎನ್​ವಿ ರಮಣ್, ಗೊಗೋಯ್ ವಿರುದ್ಧದ ಆರೋಪ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಚೀಫ್ ಜಸ್ಟೀಸ್ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನ ಸುಪ್ರಿಂಕೋರ್ಟ್​ ತನಿಖೆಗಾಗಿ ನೇಮಕ ಮಾಡಿತ್ತು. ನ್ಯಾಯಮೂರ್ತಿಗಳಾದ ಎನ್​ವಿ ರಮಣ್, ಎಸ್ ಎ. ಬೊಬ್ಡೆ, ಇಂದಿರಾ ಬ್ಯಾನರ್ಜಿ ವಿಚಾರಣೆ ಸಮಿತಿಯಲ್ಲಿದ್ದರು. ಆದರೆ, ಎನ್​ವಿ ರಮಣ್ ವಿಚಾರಣೆಗೆ ಆರೋಪಿಸಿರುವ ಮಹಿಳೆ ವಿರೋಧ ವ್ಯಕ್ತಪಡಿಸಿದ್ದರಿಂದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇನ್ನು, ನ್ಯಾಯಮೂರ್ತಿ ಎನ್​.ವಿ.ರಮಣ್, ರಂಜನ್ ಗೊಗೋಯ್ ಅವರ ಫ್ಯಾಮಿಲಿ ಸ್ನೇಹಿತ ಅನ್ನೋ ಕಾರಣಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv