ಸಿಜೆಐ ವಿರುದ್ಧ ವಿಚಾರಣಾ ಸಮಿತಿಯಲ್ಲಿ ನ್ಯಾ. ಇಂದು ಮಲ್ಹೋತ್ರಾ

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ವಿಚಾರಣೆಗಾಗಿ ರಚಿಸಿರುವ ನ್ಯಾ.ಎಸ್​.ಎ. ಬೋಬ್ಡೆ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಸದಸ್ಯ ಸಮಿತಿಯಿಂದ ನ್ಯಾ.ಎನ್​.ವಿ.ರಮಣ್​ ಹಿಂದೆ ಸರಿದಿದ್ದು, ಈಗ ಅವರ ಸ್ಥಾನಕ್ಕೆ ನ್ಯಾ. ಇಂದು ಮಲ್ಹೋತ್ರಾ ಅವರನ್ನು ನೇಮಕ ಮಾಡಲಾಗಿದೆ. ನ್ಯಾ. ರಮಣ್​ರವರು ರಂಜನ್​ ಗೊಗೊಯಿ ಅವರ ಆಪ್ತರಾಗಿದ್ದು, ಕುಟುಂಬ ಸ್ನೇಹಿತರೂ ಆಗಿದ್ದಾರೆ ಅಂತಾ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಲಯಕ್ಕೆ ಬರೆದ ಪತ್ರದಲ್ಲಿ, ತನ್ನ ಅಫಿಡೆವಿಟ್​ನಲ್ಲಿ ಮತ್ತು ತಾವು ಸಲ್ಲಿಸಿರುವ ಸಾಕ್ಷ್ಯಗಳ ವಸ್ತುನಿಷ್ಠ ಮತ್ತು ನ್ಯಾಯಯುತ ಆಲಿಕೆ ನಡೆಯುವುದಿಲ್ಲ ಅಂತ ಉಲ್ಲೇಖಿಸಿದ್ದರು. ಇನ್ನು ವಿಚಾರಣೆ ಸಮಿತಿಗೆ ಹೆಚ್ಚು ಸಂಖ್ಯೆಯ ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಕೋರಿದ್ದರು ಎನ್ನಲಾಗಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv