ನ್ಯಾಯಾಂಗದಲ್ಲಿ ಕ್ರಾಂತಿಯಾಗಬೇಕು ಸುಧಾರಣೆಯಲ್ಲ: ನ್ಯಾ.ಗೋಗಯ್

ನವದೆಹಲಿ: ನ್ಯಾಯಾಂಗ ಸಂಸ್ಥೆ ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗಬೇಕಾದರೆ ಕ್ರಾಂತಿಯ ಅವಶ್ಯಕತೆ ಇದೆಯೇ ಹೊರತು ಸುಧಾರಣೆಯಲ್ಲ ಅಂತ ಸುಪ್ರೀಂ ಕೋರ್ಟ್​ನ ಹಿರಿಯ ನ್ಯಾಯಮೂರ್ತಿ ರಾಜನ್ ಗೋಗಯ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ತೀನ್ ಮೂರ್ತಿ ಭವನದಲ್ಲಿ ರಾಮನಾಥ್ ಮಯಾಂಕ್​ ಸ್ಮರಣಾರ್ಥವಾಗಿ ನಡೆದ ‘ವಿಷನ್ ಆಫ್‌ ಜಸ್ಟೀಸ್’​ ಕುರಿತ ಉಪನ್ಯಾಸದ ವೇಳೆ ಗೋಗಯ್, ನ್ಯಾಯಾಂಗದ ಕೊನೆಯ ಭರವಸೆಯ ಕೋಟೆ ಹಾಗೂ ಸಂವಿಧಾನದ ಅತಿ ದೊಡ್ಡ ರಕ್ಷಕ ಅಂತ ಹೇಳಿದ್ದಾರೆ. ನ್ಯಾಯಾಂಗ ಸಾಮಾಜಿಕ ನಂಬಿಕೆಗೆ ಆಧಾರವಾಗಿದೆ. ಕೊನೆಯದಾಗಿ ಮನುಷ್ಯನಿಗೆ ಇಲ್ಲಿ ನ್ಯಾಯಸಿಗುವ ಹಿನ್ನೆಲೆಯಲ್ಲಿ ಇದೊಂದು ಸಂವಿಧಾನವನ್ನು ಉಳಿಸುವ ರಕ್ಷಕನಂತಿದೆ ಅಂತ ಹೇಳಿದ್ದಾರೆ. ಇನ್ನೂ ಇದೇ ಅಕ್ಟೋಬರ್‌ 2 ರಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಿವೃತ್ತಿ ಬಳಿಕ ಹಿರಿಯ ನ್ಯಾಯಮೂರ್ತಿಗಳಾಗಿರುವ ರಾಜನ್‌ ಗೋಗಯ್‌ ಸಿಜೆಐ ಆಗಿ ನೇಮಕವಾಗುವ ಸಾಧ್ಯತೆ ಇದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv