ಸಾವನ್ನಪ್ಪಿದ ಮಧುಗೆ ನ್ಯಾಯ ನೀಡಿ, ಬೃಹತ್ ಱಲಿ ಹರ್ಷಿಕಾ-ಭುವನ್ ಭಾಗಿ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಸಾವಿನ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಮಧು ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ. ನಗರದ ಮಾಣಿಕ್ ಪ್ರಭು ದೇವಸ್ಥಾನದಿಂದ ಬೃಹತ್ ಱಲಿ ಹೊರಟಿದ್ದು, ಎಬಿವಿಪಿ, ಎಸ್​​ಎಫ್​​ಐ, ಡಿವೈಎಫ್​​ಐ ಸೇರಿದಂತೆ ವಿವಿಧ ಸಂಘಟನೆ ಹಾಗೂ  ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ವಿಶ್ವಕರ್ಮ ಸಮಾಜದ ಶ್ರೀ ಶಿವಕುಮಾರ ಸ್ವಾಮೀಜಿಗಳೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಱಲಿಯಲ್ಲಿ ನಟ ಭುವನ್​​ ಹಾಗೂ ನಟಿ ಹರ್ಷಿಕಾ ಪೂಣಚ್ಚ ಭಾಗಿಯಾಗಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಹರ್ಷಿಕಾ, ಮಧು ಸಾವಿಗೆ ನ್ಯಾಯ ಸಿಗಬೇಕು ಅಂತ ನಾವು ಕೂಡ ಪ್ರತಿಭಟನೆ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಹೋರಾಟಕ್ಕೆ ಸಪೋರ್ಟ್ ಮಾಡುತ್ತಿದ್ದೇವೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ತನಿಖೆ ಕ್ಷಿಪ್ರ ಗತಿಯಲ್ಲಿ ನಡೆಯಬೇಕು. ಕೃತ್ಯದಲ್ಲಿ ಯಾರೆ ಭಾಗಿಯಾಗಿದ್ರೂ  ಶಿಕ್ಷೆ ಆಗಲೇಬೇಕು. ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಮಧು ಸಾವಿಗೆ ನ್ಯಾಯ ಸಿಗುವವರೆಗೂ ಇದೇ ರೀತಿ ರಾಜ್ಯ, ದೇಶ್ಯಾದ್ಯಂತ ಹೋರಾಟ ನಡಿತಾನೆ ಇರುತ್ತೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv