ಜ್ಯೂ. ವಿಷ್ಣುವರ್ಧನ್​​ಗೆ ಹೃದಯಸಂಬಂಧಿ ಕಾಯಿಲೆ, ಚಿಕಿತ್ಸಾ ವೆಚ್ಚಕ್ಕಾಗಿ ಪರದಾಟ

ಹುಬ್ಬಳ್ಳಿ: ಜ್ಯೂನಿಯರ್ ವಿಷ್ಣುವರ್ಧನ್ ಎಂ.ಡಿ ಅಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಇಲ್ಲದೆ ಪರದಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಡಿ ಅಲಿ, ಸುಮಾರು 35 ವರ್ಷಗಳಿಂದ ಖ್ಯಾತ ನಟರಾದ ದಿವಂಗತ ಅಂಬರೀಶ್, ಶಿವರಾಜ್ ಕುಮಾರ್, ಉಪೇಂದ್ರ, ರಜನಿಕಾಂತ್ ಸೇರಿದಂತೆ ಹಲವು ನಾಯಕ ನಟರೊಂದಿಗೆ ಅಭಿನಯ ಮಾಡಿದ್ದಾರೆ. 10ಕ್ಕೂ ಹೆಚ್ಚು ಸೀರಿಯಲ್​​ಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಇಲ್ಲದೆ ಪರದಾಡುವಂತಾಗಿದೆ. ಹಾಗಾಗಿ ಹುಬ್ಬಳ್ಳಿಯಲ್ಲಿ ಫೆಬ್ರವರಿ 26 ರಂದು ಎಂ.ಡಿ ಅಲಿ ಹಾಗೂ ಕೆಲವು ಜ್ಯೂನಿಯರ್ ನಟರೊಂದಿಗೆ ಕಾರ್ಯಕ್ರಮ ನಡೆಸಿ ಬಂದ ಹಣದಿಂದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv