ಕಿರಿಯ ವೈದ್ಯರ ಪ್ರತಿಭಟನೆ​​: ಆ್ಯಂಬುಲೆನ್ಸ್​ನಲ್ಲೇ ಹೆರಿಗೆ

ದಾವಣಗೆರೆ: ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ಕಿರಿಯ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದ ಪರಿಣಾಮ ರೋಗಿಗಳಿಗೆ ಸಿಗಬೇಕಾದ ಚಿಕಿತ್ಸೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೇ, ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪವೂ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಆ್ಯಂಬುಲೆನ್ಸ್​ನಲ್ಲೇ ಗರ್ಭಿಣಿಯೊಬ್ಬರ ಹೆರಿಗೆ ಆಗಿದೆ.
ಹರಪನಹಳ್ಳಿ ತಾಲೂಕಿನ ಹಿತ್ತಮಗೇರಿ ಗ್ರಾಮದ ಅಂಬಿಕಾ ಎಂಬುವವರ ಹೆರಿಗೆ ಆ್ಯಂಬುಲೆನ್ಸ್​ನಲ್ಲೇ ನಡೆದಿದೆ. ಅಂಬಿಕಾ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ನಗರದ ಹಳೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಂಬಂಧಿಕರು ಮುಂದಾಗಿದ್ದರು. ಆದರೆ ಕಿರಿಯ ವೈದ್ಯರ ಪ್ರತಿಭಟನೆಯ ನೆಪ ಹೇಳಿ, ಅಂಬಿಕಾರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳುಲು ಅಲ್ಲಿನ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆಯೂ ಸಲಹೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಆ್ಯಂಬುಲೆನ್ಸ್​ನಲ್ಲೇ ಹೆರಿಗೆ ಆಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv