ನ್ಯಾಯಧೀಶರಿಂದ 153 ಕೈದಿಗಳಿಗೆ ಯೋಗ ಪಾಠ..!

ಚಿತ್ರದುರ್ಗ: ಜಗತ್ತಿನೆಲ್ಲಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಮಾಡಲಾಗ್ತಿದೆ. ಚಿತ್ರದುರ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳೂ ಕೂಡ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ನ್ಯಾಯಾಧೀಶ ಎಸ್.ಬಿ ವಸ್ತ್ರಮಠ ನೇತೃತ್ವದಲ್ಲಿ ಯೋಗಾಭ್ಯಾಸದಲ್ಲಿ 153 ಕೈದಿಗಳು ಭಾಗವಹಿಸಿದ್ದರು.
ಇನ್ನು, ಜಿಲ್ಲಾಡಳಿತ, ಪತಾಂಜಲಿ ಯೋಗ ತರಬೇತಿ ಸಂಸ್ಥೆಯಿಂದಲೂ ಯೋಗ ದಿನಾಚರಣೆ ನಡೆಯಿತು. ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಯೋಗಭ್ಯಾಸ ಆಯೋಜನೆ ಮಾಡಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಯೋಗಾಭ್ಯಾಸ ಸ್ಟಾರ್ಟ್​ ಆಗಿತ್ತು. ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಎಸ್ಪಿ ಶ್ರೀನಾಥ್ ಎಂ ಜೋಷಿ ಅವರಿಂದ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದರು. ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿರುವ ಯೋಗಪಟುಗಳು ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv