ಗೌರಿ ಹತ್ಯೆ ಪ್ರಕರಣ: 4 ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರಿಕೆ

ಬೆಂಗಳೂರು: ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅರೋಪಿಗಳ ನ್ಯಾಯಾಂಗ ಬಂಧನವನ್ನು 14 ದಿನಗಳ ಕಾಲ ಮುಂದುವರಿಸಲಾಗಿದೆ. ಆರೋಪಿಗಳಾದ ಸುನೀಲ್ ಅಲಿಯಾಸ್ ಪ್ರವೀಣ್, ಆಮೋಲ್ ಕಾಳೆ, ಅಮಿತ್ ದಿಗ್ವೇಕರ್, ಮನೋಹರ್ ದುಂಡಪ್ಪ ಯಾವಡೆ ಅವರುಗಳನ್ನು 1ನೇ ಎಸಿಎಂಎಂ ಕೋರ್ಟ್‌ನಲ್ಲಿ ಎಸ್ಐಟಿ ಪೊಲೀಸ್ರು ಹಾಜರು ಪಡಿಸಿದ್ದರು.

ಇನ್ನು ಆರೋಪಿಗಳ ವೈದ್ಯಕೀಯ ತಪಾಸಣೆ ವಿಚಾರಕ್ಕೆ ಸಂಬಂಧಪಟ್ಟಂತೆ 3ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರು ರಜಾ ಹಿನ್ನೆಲೆ ಮೂರನೇ ಎಸಿಎಂಎಂ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲು ಸಲಹೆ ನೀಡಲಾಗಿದೆ. ಆರೋಪಿಗಳ ಪರ ವಕೀಲರಿಗೆ 1 ನೇ ಎಸಿಎಂಎಂ ಕೋರ್ಟ್ ಈ ಸಲಹೆ ನೀಡಿದೆ. ಅಲ್ಲದೇ ಆರೋಪಿಗಳ ವೈದ್ಯಕೀಯ ಪರೀಕ್ಷೆಗೊಳಪಡಿಸಲು ಇಚ್ಛಿಸಿದರೆ ಹಾಜರಿಪಡಿಸಿ ಎಂದೂ 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಎನ್. ಜಗದೀಶ್​ ಸಲಹೆ ನೀಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv