ಆಟೋ ಮೇಲೂ ಬಂತು ‘ಜೋಡೆತ್ತು’ ಫೋಟೊ..!

ಕನ್ನಡ.. ಕನ್ನಡ ಚಿತ್ರರಂಗ.. ಆಟೋ ಚಾಲಕರ ಅವಿನಾಭಾವ ಸಂಬಂಧವನ್ನು ಬಣ್ಣಿಸಲು ಅಸಾಧ್ಯ. ಆ ಕಾಲದಿಂದಲೂ ಸ್ಯಾಂಡಲ್​ವುಡ್​ ಬೆಳವಣಿಗೆಯ ಹಿಂದೆ ಆಟೋ ಚಾಲಕರು ನಿಂತಿದ್ದಾರೆ. ಯಾವ ನಟ ಅಥವಾ ಸಿನಿಮಾ ಆಟೋ ಚಾಲಕರ ಮನಸ್ಸು ಗೆಲ್ಲುತ್ತೋ, ಅವರು ಯಶಸ್ಸು ಸಾಧಿಸೋದ್ರಲ್ಲಿ ಸಂದೇಹವೇ ಇಲ್ಲ. ಅಲ್ಲದೇ ಆಟೋಗಳ ಮೇಲೆ ಫೋಟೊ ಬೀಳೋದಕ್ಕೂ ಪುಣ್ಯ ಮಾಡಿರಬೇಕು. ಅಂತಹ ಅಸಂಖ್ಯಾತ ಫ್ಯಾನ್ಸ್​ಗಳಿಸಿರೋ ಸಾಲಿನಲ್ಲಿ ದರ್ಶನ್​ – ಯಶ್ ಮುಂಚೂಣಿಯಲ್ಲಿದ್ದಾರೆ. ಆದರೆ ಆಗ ಒಬ್ಬರದ್ದೇ ಇರುತ್ತಿತ್ತು. ಈಗ ‘ಜೋಡೆತ್ತಿನ’ ಫೋಟೊ ಒಟ್ಟಿಗೆ ಓಡಾಡುತ್ತಿದೆ.

ಸ್ಯಾಂಡಲ್​ವುಡ್​ ಅಣ್ತಮ್ಮಾಸ್​..!
ಮಂಡ್ಯ ಲೋಕಸಭಾ ಚುನಾವಣೆಯಿಂದ ಯಾರಿಗೆ ಏನಾಯ್ತೋ ಗೊತ್ತಿಲ್ಲ. ಆದರೆ ದರ್ಶನ್​-ಯಶ್ ಫ್ಯಾನ್ಸ್​ಗೆ ಹಾಲು ಕುಡಿದಷ್ಟೇ ಸಂತಸವಾಗಿದೆ. ಇಬ್ಬರೂ ನಟರು ಒಟ್ಟಿಗೆ ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಅದ್ಯಾವಾಗ ‘ಜೋಡೆತ್ತು’ ಅಂತಾ ಪ್ರಚಾರಕ್ಕೆ ಇಳಿದರೋ, ಅಲ್ಲಿಂದ ಅಣ್ಣತಮ್ಮರಂತೆ ದರ್ಶನ್​-ಯಶ್​ ಗುರುತಿಸಿಕೊಂಡರು. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ನಟಿಸೋದಾಗಿಯೂ ಹೇಳಿಕೊಂಡಿದ್ರು. ಇದರಿಂದ ಪರಸ್ಪರ ಅಭಿಮಾನಿಗಳು ಸಂಭ್ರಮಿಸಿದ್ದರು. ಇದೀಗ ಎಲ್ಲೆಡೆ ಜೋಡೆತ್ತಿನದ್ದೇ ದರ್ಬಾರು ಶುರುವಾಗಿದೆ. ಮಂಡ್ಯದಲ್ಲಿ ಅಬ್ಬರಿಸಿದ್ದ ಜೋಡೆತ್ತಿನ ಕೂಗು ರಾಜ್ಯದೆಲ್ಲೆಡೆ ಸದ್ದು ಮಾಡ್ತಿದೆ. ಆಟೋಗಳ ಮೇಲೂ ದರ್ಶನ್​-ಯಶ್ ಇರುವಂತಹ ಜೋಡೆತ್ತಿನ ಪೋಸ್ಟರ್ಸ್ ಹರಿದಾಡ್ತಿವೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv