ಚಿನ್ನಾಭರಣ ಎಗರಿಸೋ ‘ಕಳ್ಳ ದಂಪತಿ’ ಕೊನೆಗೂ ಪೊಲೀಸ್​ ಅತಿಥಿಯಾದ್ರು..!

ಬಾಗಲಕೋಟೆ: ನಗರದ ಶಾಂತಿ ಪ್ರೀಯಾ ಹೋಟೆಲ್​ಗೆ ಉಪಹಾರಕ್ಕೆ ಹೋದ ಸಂದರ್ಭದಲ್ಲಿ, ಮಹಿಳೆಯೊಬ್ಬಳು ನಗರದ ಬಸವರಾಜ ಗೌಡ ಎಂಬವರ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂನ್ 24 ರಂದು ನಗರ ನಿವಾಸಿ ಬಸವರಾಜ ಗೌಡ, ಸಂಬಂಧಿಕರ ಮದುವೆಯ ಹಿನ್ನೆಲೆಯಲ್ಲಿ 10 ಲಕ್ಷ ಮೌಲ್ಯದ 270 ಗ್ರಾಂ ಬಂಗಾರದೊಂದಿಗೆ ಮದುವೆಗೆ ಹೊರಟಿದ್ದರು. ಈ ವೇಳೆ ಮಹಿಳೆಯೊಬ್ಬಳು ಅವರ ಬ್ಯಾಗ್​ ಕದ್ದೊಯ್ದಿದ್ದಳು. ಈ ದೃಶ್ಯ ಹೋಟೆಲ್​ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಪುರ ಠಾಣೆಯ ಪೊಲೀಸರು ಧಾರವಾಡ ನವನಗರ ನಿವಾಸಿಗಳಾದ ಶಿರೀಶ್ ಮೊರಬ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದಾರೆ. ಅಲ್ಲದೆ ಅವರಿಂದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.com