ಸಂಬಳಕ್ಕಾಗಿ ಜೆಟ್​ ಏರ್​ವೇಸ್​ ಉದ್ಯೋಗಿಗಳ ಹೋರಾಟ..!

ನವದೆಹಲಿ: ಮೂರುವರೆ ತಿಂಗಳಿನಿಂದ ಸಿಗದ ಸಂಬಳವನ್ನ ತಮಗೆ ದೊರಕಿಸಿ ಕೊಡಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಅಂತ ಜೆಟ್ ಏರ್​ವೇಸ್​ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ 500ಕ್ಕೂ ಹೆಚ್ಚು ಸಿಬ್ಬಂದಿ ಕಳೆದ ಮೂರುವರೆ ತಿಂಗಳಿನಿಂದ ನಮಗೆ ಸಂಬಳ ಬಂದಿಲ್ಲ. ಸುಮಾರು 23 ಸಾವಿರ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇವಲ ನಾವಷ್ಟೇ ಅಲ್ಲ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೂಡ ಜೆಟ್ ಏರ್​ವೇಸ್​ ಮತ್ತೆ ಆರಂಭವಾಗಲಿ ಅಂತ ಬಯಸುತ್ತಿದ್ದಾರೆ. ಹೀಗಾಗಿ, ಪ್ರಧಾನಿ ಹಾಗೂ ವಿಮಾನಯಾನ ಸಚಿವಾಲಯ ಮಧ್ಯಪ್ರವೇಶಿಸಿ ಜೆಟ್​ ಏರ್​ವೇಸ್​ ಉಳಿಸಬೇಕು ಅಂತ ಆಗ್ರಹಿಸಿದ್ದಾರೆ.