ದುಡ್ಡಿಗಾಗಿ ಮಾರಾಟವಾಯ್ತಾ ಜೆಡಿಎಸ್​ ಟಿಕೆಟ್​..? #ViralAudio

ಜೆಡಿಎಸ್‌ನಲ್ಲಿ ದುಡ್ಡಿದ್ದೋರಿಗೆ ಟಿಕೆಟ್‌ ಸಿಗುತ್ತೆ ಅನ್ನೋ ಆರೋಪವಿದೆ. ಈ ಹಿಂದೆಯೂ ಕೂಡ ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಸೂಟ್‌ಕೇಸ್‌ ತಂದೋರಿಗೆ ಮೊದಲ ಸ್ಥಾನ ನೀಡಲಾಗುತ್ತೆ ಅಂತಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕುಮಾರಸ್ವಾಮಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋದಲ್ಲಿ ಜೆಡಿಎಸ್‌ನಲ್ಲಿ ಟಿಕೆಟ್‌ನ್ನು ದುಡ್ಡಿಗೆ ಮಾರಲಾಗಿದೆ ಅನ್ನೋ ಮಾತಿಗೆ ಪುಷ್ಠಿ ದೊರೆತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ಗಾಗಿ ಹಾಲಿ ಶಾಸಕ ರಾಜಣ್ಣ ಹಾಗೂ ದೇವೇಗೌಡರ ಬೆಂಬಲಿಗ ರವಿಕುಮಾರ್‌ ನಡುವೇ ಪೈಪೋಟಿ ನಡೆದಿತ್ತು. ಕೊನೆಗೆ ಟಿಕೆಟ್‌ ರವಿಕುಮಾರ್‌ ಪಾಲಾಗಿತ್ತು. ಇದಕ್ಕೆ ಅಸಮಾಧಾನ ಹೊರಹಾಕಿದ್ದ ಕುಮಾರಸ್ವಾಮಿ, ರಾಜಣ್ಣ ಅವರ ಸಂಬಂಧಿ ಜೊತೆ ಮಾತನಾಡಿರುವ ಆಡಿಯೋ ವೈರಲ್‌ ಆಗಿದ್ದು, ಇದರಲ್ಲಿ ಕುಮಾರಸ್ವಾಮಿ, ರವಿಕುಮಾರ್‌, ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ದುಡ್ಡುಕೊಟ್ಟು ಟಿಕೆಟ್‌ ಕೊಟ್ಟರೋ ಅಥವಾ ಹೇಗೆ ಟಿಕೆಟ್‌ ತಂದಿದ್ದಾರೆ ಅಂತಾ ಮಾತನಾಡಿದ್ದಾರೆ. ಈ ಮಾತು ಈಗ ದುಡ್ಡಿಗಾಗಿ ಜೆಡಿಎಸ್​ ಟಿಕೆಟ್ ಮಾರಲಾಗಿದೆ ಎನ್ನುವುದನ್ನು ತೋರಿಸುತ್ತದೆ. ಇನ್ನೂ ಮುಂದುವರೆದು ಮಾತನಾಡಿರುವ ಕುಮಾರಸ್ವಾಮಿ, ರಾಜಣ್ಣ ಅವರನ್ನು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲೋದಕ್ಕೆ ಹೇಳಿ. ಅವರನ್ನು 10 ಕೋಟಿ ಕೊಟ್ಟು ಗೆಲ್ಲಿಸಿಕೊಂಡು ಬರುವ ಜವಬ್ದಾರಿ ನನ್ನದು. ರವಿ ಗೆದ್ದರೇ ನನಗೇನು ಪ್ರಯೋಜನವಿಲ್ಲಾ. ನೀವು ರಾಜಣ್ಣ ಕುಮಾರಸ್ವಾಮಿ ಕ್ಯಾಂಡಿಡೇಟ್‌ ಅಂತಾ ಪ್ರಚಾರ ಮಾಡಿ ಅಂತಾ ಕರೆ ನೀಡಿದ್ದಾರೆ. ಈ ಆಡಿಯೋದ ಸತ್ಯಾಸತ್ಯತೆ ಗೊತ್ತಿಲ್ಲ. ಒಂದು ವೇಳೆ ಇದು ನಿಜವಾಗಿಯೂ ಕುಮಾರಸ್ವಾಮಿ ಅವರ ಧ್ವನಿಯೇ ಆಗಿದ್ದರೆ, ನಿಜಕ್ಕೂ ಇದೊಂದು ಶಾಕಿಂಗ್​ ಸಂಗತಿಯೇ ಸರಿ.

ಆಡಿಯೋದಲ್ಲಿ ಏನಿದೆ?

ನಿಜಕ್ಕೂ ಕುಮಾರಸ್ವಾಮಿ ಹೀಗೆ ಹೇಳಿದ್ರಾ?!

ಜೆಡಿಎಸ್​ನವರು ಹಣ ಪಡೆದು ಟಿಕೆಟ್ ನೀಡಿದ್ರು ಅಂತಾ ಹೇಳು ಅಂತಾ ಹೆಚ್​ಡಿಕೆ ಹೇಳಿದ್ಯಾಕೆ? ನಿಜಕ್ಕೂ ಕುಮಾರಸ್ವಾಮಿ ಹೀಗೆ ಹೇಳಿದ್ರಾ?!ಹೆಚ್ಚಿನ ಡಿಟೇಲ್ಸ್​ಗೆ ಕ್ಲಿಕ್ ಮಾಡಿ:1. http://firstnews.tv/jds-party-tickets-are-sold-for-money-whats-hdk-says/2. http://firstnews.tv/is-hdk-trying-to-make-his-own-party-candidate-lose-election/61/

Posted by FirstNews Kannada on Monday, May 7, 2018

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv