ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಸ್ಥಳೀಯ ಜೆಡಿಎಸ್ ಮುಖಂಡರು ನಾಪತ್ತೆ

ಕೊಲಂಬೊ: ನಿನ್ನೆ ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಮಧ್ಯೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಕೆಲ ಸ್ಥಳೀಯ ಜೆಡಿಎಸ್​ ಮುಖಂಡರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗ್ತಿದೆ.  ನೆಲಮಂಗಲ, ತುಮಕೂರು ಹಾಗೂ ಬೆಂಗಳೂರು ಉತ್ತರ ತಾಲೂಕಿನ ಏಳು ಜನ ಜೆಡಿಎಸ್‌ ಮುಖಂಡರು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಇವರೆಲ್ಲಾ ಈಗ ಸಂಪರ್ಕಕ್ಕೆ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ. ಶಿವಣ್ಣ, ಮುನಿಯಪ್ಪ, ಲಕ್ಷ್ಮೀ ನಾರಾಯಣ, ಹನುಮಂತರಾಯಪ್ಪ, ರಮೇಶ್, ಮಾರೇಗೌಡ ಹಾಗೂ ಪುಟ್ಟರಾಜು ಸಂಪರ್ಕಕ್ಕೆ ಸಿಗದ ಮುಖಂಡರು.

ಇವರೆಲ್ಲರೂ ಮೊದಲ ಹಂತದ ಚುನಾವಣೆಗೆ ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ‌ ಪರ ಪ್ರಚಾರ ಮುಗಿಸಿ ಏ.20ರಂದು ಶ್ರೀಲಂಕಾಗೆ ತೆರಳಿದ್ದರು. ಶ್ರೀಲಂಕಾದ ಶಾಂಗ್ರಿಲಾ‌ ಹೋಟೆಲ್​​ನಲ್ಲಿ ತಂಗಿದ್ದರು. ಆದ್ರೆ ನಿನ್ನೆ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕ ಮುಖಂಡರು ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv