‘ಎರಡು ಪಕ್ಷಗಳನ್ನೂ ನಿರ್ನಾಮ ಮಾಡ್ತೀನಿ’

ರಾಮನಗರ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷವನ್ನ ನಿರ್ನಾಮ ಮಾಡುವುದೇ ನನ್ನ ಕೊನೆಯ ಹೋರಾಟ ಎಂದು ಜೆಡಿಎಸ್​​ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.ಮಾಗಡಿಯಲ್ಲಿ ನಡೆದ ವಿಕಾಸಪರ್ವಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ರಾಹುಲ್​ ಗಾಂಧಿಗೆ, ಸೋನಿಯಾ ಗಾಂಧಿ ಅವರೇ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಿ ಎಂದು ಸಲಹೆ ನೀಡಿದ್ದಾರೆ.ಆದ್ರೆ ರಾಹುಲ್​ ಜೆಡಿಎಸ್ ಪಕ್ಷವನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಅಲ್ಲದೆ ಜೆಡಿಎಸ್ ಪಕ್ಷವನ್ನ ನಿರ್ನಾಮ ಮಾಡಲು ಹೊರಟಿದ್ದಾರೆ. ಜೆಡಿಎಸ್ ಪಕ್ಷವನ್ನ ಯಾರಿಂದಲೂ ನಿರ್ನಾಮ ಮಾಡಲು ಸಾಧ್ಯವಿಲ್ಲ ಅಂತ ಹೆಚ್​ಡಿಕೆ ಗುಡುಗಿದ್ರು.
ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ? ಇದನ್ನ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಲಿ.ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ಕೋಟಿ ಕೋಟಿ ಹಣವಿದೆ.ಅವರು ಹಣ ಬಲದಿಂದ ಚುನಾವಣೆ ಮಾಡಲು ಹೊರಟಿದ್ದಾರೆ. ಆದ್ರೆ ಜೆಡಿಎಸ್​​​ನಲ್ಲಿ ಹಣವಿಲ್ಲ ಜನರ ಶಕ್ತಿ ಇದೆ.ಅದೇ ನಮ್ಮ ಆಸ್ತಿ. ಕುಮಾರಸ್ವಾಮಿ ಸಿಎಂ ಆಗೋದನ್ನ ಎರಡೂ ಪಕ್ಷಗಳಿಂದ ತಪ್ಪಿಸಲಿಕ್ಕೆ ಸಾಧ್ಯವಿಲ್ಲ. ಅದನ್ನ ರಾಜ್ಯದ ಜನರು ನಿರ್ಧರಿಸಲಿದ್ದಾರೆ ಎಂದ್ರು.
ನನಗೆ ಟೋಪಿ ಹಾಕಿ ಹೋಗಿದ್ದಾರೆ
ಜೆಡಿಎಸ್​ಗೆ 20-40 ಸ್ಥಾನ ಬರೋದಿಲ್ಲ ಅಂತಾ ಇಲ್ಲಿನ ಶಾಸಕರು ಹೇಳಿ ಹೋಗಿದ್ದಾರೆ.ಅವರಿಗೆ ಇಲ್ಲಿನ ಜೆಡಿಎಸ್ ಕಾರ್ಯಕರ್ತರು ಇವತ್ತು ತಕ್ಕ ಉತ್ತರ ನೀಡಿದ್ದೀರಿ ಅಂತ ಏಳು ಮಂದಿ ಬಂಡಾಯ ಶಾಸಕರ ವಿರುದ್ಧ ಪರೋಕ್ಷವಾಗಿ ಗುಡುಗಿದ್ರು. ಅವ್ರ ಬಗ್ಗೆ ಮಾತನಾಡಿ ಕೆಸರಿನ ಮೇಲೆ ಕಲ್ಲು ಹಾಕಿಕೊಳ್ಳಲು ಇಷ್ಟವಿಲ್ಲ,ಕೆಸರುಗಳೆಲ್ಲಾ ಇಂದು ದೂರವಾಗಿದ್ದಾರೆ ಎಂದು ಟಾಂಗ್ ಕೊಟ್ರು. ಅವರು ಎರಡು ವರ್ಷಗಳ ಹಿಂದೆ ನನಗೆ ಟೋಪಿ ಹಾಕಿ ಹೋಗಿದ್ದಾರೆ ಅಂತ ಅಸಮಾಧಾನ ಹೊರಹಾಕಿದ್ರು.
ಜೆಡಿಎಸ್​ಗೆ ಕಾಂಗ್ರೆಸ್ ಬಿ ಟೀಂ
ರಾಹುಲ್ ಭಾಷಣ ನೋಡಿದ್ರೆ ಅವ್ರು ಸಿದ್ದರಾಮಯ್ಯ ಅವ್ರ ಪಂಜರದ ಗಿಣಿಯಾಗಿದ್ದಾರೆ.ಅದಕ್ಕೇನೆ ಜೆಡಿಎಸ್, ಸಂಘ ಪರಿವಾರ ಅಂತಾ ರಾಹುಲ್ ಹೇಳಿದ್ದಾರೆ. ಕಾವೇರಿ ನದಿ ನೀರು ಹರಿಯುವ ಪ್ರದೇಶದಲ್ಲಿ ಬಂದು ಜೆಡಿಎಸ್ ಪಕ್ಷವನ್ನ ಕೆಣಕಿದ್ದೀರಿ.ಜೆಡಿಎಸ್ ಬಿಜೆಪಿಗೆ ಬಿ ಟೀಂ ಅಲ್ಲಾ ಜೆಡಿಎಸ್​ಗೆ ಕಾಂಗ್ರೆಸ್ ಬಿ ಟೀಂ ಎಂದು ವ್ಯಂಗ್ಯವಾಡಿದರು.ಜೊತೆಗೆ ಸಿಎಂ ಸಿದ್ದರಾಮಯ್ಯಗೂ ಟಾಂಗ್ ಕೊಟ್ಟ ಹೆಚ್​ಡಿಕೆ, ಅವರೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡುವುದು ಅನ್ನೋ ಸತ್ಯ ಪರಮೇಶ್ವರ್ ಹಾಗು ಖರ್ಗೆ ಅವರಿಗೆ ಚನ್ನಾಗಿ ಗೊತ್ತಿದೆ ಎಂದು ಲೇವಡಿಯಾಡಿದ್ರು.
ಲಿಕ್ಕರ್​ ತೆರಿಗೆ ಹಣ ಅಕ್ಕಿಗೆ ಬಳಕೆ
ಸಿದ್ದರಾಮಯ್ಯ ಅವ್ರು ಹಲವು ಭಾಗ್ಯಗಳನ್ನ ಕೊಟ್ಟೆ ಅಂತಾ ಡ್ಯಾನ್ಸ್ ಮಾಡುತ್ತಾ ಪ್ರಚಾರ ಮಾಡ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​​ ಹಗಲು ದರೋಡೆ ಮಾಡುತ್ತಿದೆ.ಸಿದ್ದರಾಮಯ್ಯನ ಹುಂಡಿಯಿಂದ ಹಣ ತಂದು ಅನ್ನಭಾಗ್ಯ ನೀಡುತ್ತಿಲ್ಲ.ಬದಲಾಗಿ ಲಿಕ್ಕರ್​ಗೆ ನೀಡುವ ತೆರಿಗೆ ಹಣದಿಂದ ಅಕ್ಕಿ ನೀಡಲಾಗುತ್ತಿದೆ ಎಂದು ಅಣಕಿಸಿದರು.
ಇಸ್ಪೀಟು ಆಡ್ಕೊಂಡು ಕುಳಿತ್ತಿದ್ರು
6 ಜನ ಶಾಕರು ಜೆಡಿಎಸ್ ನಿರ್ನಾಮ ಮಾಡಲು, ಕಾಂಗ್ರೆಸ್ ಪಕ್ಷ ಕಟ್ಟಲು ಹೋಗಿದ್ದಾರೆ.ಅವ್ರು ಎಲ್ಲೂ ಜೆಡಿಎಸ್​​ ಪಕ್ಷಕ್ಕಾಗಿ ಕೆಲಸ ಮಾಡಿಲ್ಲ ಬದಲಾಗಿ ಇಸ್ಪೀಟು ಆಡಿಕೊಂಡು ಕುಳಿತಿರುತ್ತಿದ್ರು ಎಂದು ಹೆಚ್​​ಡಿಕೆ ಆರೋಪಿಸಿದರು.

Leave a Reply

Your email address will not be published. Required fields are marked *