11 Feb 2019
ಬೆಂಗಳೂರು: ‘ಆಪರೇಷನ್ ಕಮಲ’ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜೆಡಿಎಸ್ ಎಸಿಬಿಗೆ ದೂರು ನೀಡಿದೆ. ಜೆಡಿಎಸ್ ಮುಖಂಡ ಸಿದ್ದರಾಜು, ಬಿಎಸ್ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ. ಫೆಬ್ರವರಿ 8ರಂದು ಬಜೆಟ್ ಅಧಿವೇಶನಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ, ಬಿಜೆಪಿ ಆಪರೇಷನ್ ಕಮಲ ನಡೆಸಿದೆ ಅಂತಾ ಆರೋಪಿಸಿ ಆಡಿಯೋ ಒಂದನ್ನ ರಿಲೀಸ್ ಮಾಡಿದ್ದರು. ಯಡಿಯೂರಪ್ಪ, ಗುರುಮಿಠಕಲ್ ಎಂಎಲ್ಎ ನಾಗನಗೌಡಗೆ ಆಮಿಷವೊಡ್ಡಿದ್ದಾರೆ. ಈ ಸಂಬಂಧ ನಾಗನಗೌಡ ಪುತ್ರ ಶರಣಗೌಡ ನಾಯಕ ಜೊತೆ ಬಿಎಸ್ವೈ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ನನ್ನ ಬಳಿ ಇದೆ ಎಂದು ಪ್ಲೇ ಮಾಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸಿಬಿಗೆ ದೂರು ನೀಡಲಾಗಿದೆ.
Follow us on:
YouTube: firstNewsKannada Instagram: firstnews.tv Face Book: firstnews.tv Twitter: firstnews.tv