HMT ಕ್ಷೇತ್ರಗಳಲ್ಲಿ ಪ್ರಜ್ವಲ್-ನಿಖಿಲ್-ದೇವೇಗೌಡರೇ ಗೆಲ್ತಾರೆ: ದ್ವಾರಕಾನಾಥ್ ಗುರೂಜಿ

ಬೆಂಗಳೂರು: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ತುಮಕೂರಿನಲ್ಲಿ ದೇವೇಗೌಡರು ಗೆಲ್ಲಲಿದ್ದಾರೆ ಎಂದು ದ್ವಾರಕನಾಥ್ ಗುರೂಜಿ ಭವಿಷ್ಯ  ನುಡಿದಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಮೊದಲು ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದು ಕಷ್ಟ ಇತ್ತು. ಆದರೆ ನಿಖಿಲ್​ ಅವರದೆ ಆದ ಕಸರತ್ತು ಮಾಡಿರೋದ್ರಿಂದ ಗೆಲುವಿಗೆ ಅನುಕೂಲ ಆಗಿದೆ. ಅವರು ಮಾಡಿದ ಒಳ್ಳೆಯ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತೆ. ಮೂರು ಕ್ಷೇತ್ರಗಳಲ್ಲೂ ದೇವೆಗೌಡರ ಕುಟುಂಬಸ್ಥರು ಗೆಲುವು ಸಾಧಿಸಲಿದ್ದಾರೆ ಎಂದರು.

ಕುಮಾರಸ್ವಾಮಿ ಸರ್ಕಾರ ನಾಲ್ಕು ‌ವರ್ಷ ಪೂರೈಸಲಿದೆ:
ಮೇ 23ರ ನಂತರ ಮತ್ತೆ ಸಿದ್ದರಾಮಯ್ಯ ‌ಸಿಎಂ ಆಗ್ತಾರೆ ಎಂಬ ಹೇಳಿಕೆಗಳ  ಕುರಿತು ಪ್ರತಿಕ್ರಿಯಿಸಿದ ದ್ವಾರಕನಾಥ್ ಗುರೂಜಿ, ಅದು ಹೇಗೆ‌ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಸಾಧ್ಯ? ಕಚ್ಚಾಡಿಕೊಂಡು ಮೈತ್ರಿಯಿಂದ ಹೊರಬಂದರೆ ಕಾಂಗ್ರೆಸ್​ಗೆ ಸರ್ಕಾರವನ್ನ ರಚನೆ ಮಾಡಲು ಸಾಧ್ಯವಿಲ್ಲ. ಆದ್ರೆ ಇದೆಲ್ಲವೂ ಅಸಾಧ್ಯ. ಯಾಕೆಂದರೆ  ಸಿಎಂ ಕುಮಾರಸ್ವಾಮಿಗೆ ದೇವರ, ಗುರುಗಳ ಅನುಗ್ರಹವಿದೆ. ಸಿಎಂ ಕುಮಾರಸ್ವಾಮಿ ಸರ್ಕಾರ ಬಿದ್ರೆ ನನಗೆ, ಪ್ರಜೆಗಳಿಗೆ ದುಃಖವಾಗುತ್ತೆ. ಕುಮಾರಸ್ವಾಮಿಯವರ ಸರ್ಕಾರ ನಾಲ್ಕು ‌ವರ್ಷ ಪೂರೈಸಲಿದೆ.

ಶಿವಮೊಗ್ಗ ಫಿಫ್ಟಿ-ಫಿಫ್ಟಿ:
ಇನ್ನು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಇಬ್ಬರು ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ಇದೆ‌. ಅಭ್ಯಥಿಗಳು ಗೆಲ್ಲುವ ಚಾನ್ಸ್ ಫಿಫ್ಟಿ-ಫಿಫ್ಟಿ ಇದೆ. ಆದ್ರೇ ಯಡಿಯೂರಪ್ಪ ನವರ ಕಡೆ ಕೊಂಚ ಒಂದು ಪರ್ಸೆಂಟ್ ಹೆಚ್ಚು ಅವಕಾಶ ಇದೆ ಎಂದು ಇದೇ ವೇಳೆ ದ್ವಾರಕನಾಥ್ ಹೇಳಿದ್ರು.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv