ಹಕ್ಕು ಚಲಾಯಿಸಿದ ಜೆಡಿಎಸ್​ ಅಭ್ಯರ್ಥಿ ಪ್ರತಾಪ್ ರೆಡ್ಡಿ

ಬಳ್ಳಾರಿ: ವಿಧಾನ ಪರಿಷತ್​​ನ ಈಶಾನ್ಯ ಪದವೀಧರ ಸ್ಥಾನಕ್ಕಾಗಿ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರತಾಪ್ ರೆಡ್ಡಿ ಮತ ಚಲಾಯಿಸಿದರು. ಕುಟುಂಬ ಸಮೇತರಾಗಿ ಆಗಮಿಸಿದ ಅವರು ಮತಗಟ್ಟೆ ಸಂಖ್ಯೆ 112ರಲ್ಲಿ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು ನಾನು ಸೋಲು ಗೆಲುವು ಎರಡನ್ನೂ ಅನುಭವಿಸಿದ್ದೇನೆ. ಹೀಗಾಗಿ ಚುನಾವಣೆಗಳಿಗೆ ಎಂದೂ ಹೆದರಿಲ್ಲ ಎಂದರು. ಕೆಲವರು ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಜನಾಭಿಪ್ರಾಯ ನನ್ನ ಕಡೆ ಕೇಳಿ ಬರುತ್ತಿದೆ. ಹೀಗಾಗಿ ಗೆಲ್ಲುವ ವಿಶ್ವಾಸ ಇದೆ ಎಂದರು. ನಮ್ಮ ಬೆಂಬಲಿಗರು ತಂಗಿದ್ದ ಹೊಟೇಲ್​​​ಗಳ ಮೇಲೆ ರೇಡ್ ಆಗಿದೆ. ಆದರೂ ಎದೆಗುಂದಿಲ್ಲ. ಸಿಎಂ ಕುಮಾರಸ್ವಾಮಿ ಅವರ ವರ್ಚಸ್ಸಿನಿಂದ ಗೆದ್ದು ಬರಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv