ನಿಖಿಲ್ ಗೆಲುವಿಗಾಗಿ ₹150 ಕೋಟಿ ವೆಚ್ಚ..!? ವೈರಲ್​​ ಆಗಿರುವ ಸ್ಫೋಟಕ ಆಡಿಯೋದಲ್ಲೇನಿದೆ..?

ಮಂಡ್ಯ: ಈ ಬಾರಿ ಮಂಡ್ಯ ಲೋಕಸಭೆ ಕ್ಷೇತ್ರ ಭಾರೀ ಸದ್ದು ಮಾಡ್ತಿದೆ. ಒಂದು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿರೋದು. ಜೊತೆಗೆ ಇವರ ವಿರುದ್ಧ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಿರೋದು. ಇನ್ನೊಂದು ಸುಮಲತಾಗೆ ಬಿಜೆಪಿ ಪರೋಕ್ಷವಾಗಿ ಬೆಂಬಲ ಸೂಚಿಸಿ ತನ್ನ ಯಾವುದೇ ಅಭ್ಯರ್ಥಿಯನ್ನ ಕಣಕ್ಕೆ ಇಳಿಸದಿರುವುದು. ಜೊತೆಗೆ ಮೈತ್ರಿ ಧರ್ಮವನ್ನ ಪಾಲಿಸದೇ ಕಾಂಗ್ರೆಸ್​ ಹಾಗೂ ಜೆಡಿಎಸ್​ನ ಕೆಲ ಕಾರ್ಯಕರ್ತರು ಸುಮಲತಾಗೆ ಜೈ ಅಂದಿದ್ದಾರೆ. ಇವೆಲ್ಲದರ ಜೊತೆ ನಟರಾದ ದರ್ಶನ್​ ಹಾಗೂ ಯಶ್ ಸುಮಲತಾ​ ಪರ ಪ್ರಚಾರದ ಅಖಾಡಕ್ಕಿಳಿದಿರುವುದು ಈ ಎಲ್ಲಾ ಕಾರಣಗಳಿಂದಾಗಿ ಮಂಡ್ಯ ಲೋಕಸಭೆ ಕ್ಷೇತ್ರ ದೇಶದ ಗಮನ ಸೆಳೆದಿದೆ.

ಇಷ್ಟುದಿನ ಆರೋಪ, ಪ್ರತ್ಯಾರೋಪಗಳಿಂದ ಸುದ್ದಿಯಾಗ್ತಿದ್ದ ಕ್ಷೇತ್ರ, ಇದೀಗ ಸ್ಫೋಟವಾಗಿರೋ ₹150 ಕೋಟಿ ಆಡಿಯೋ ಬಾಂಬ್​ ದೇಶವನ್ನೇ ಬೆಚ್ಚಿ ಬೀಳಿಸಿದೆ. ‘‘ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ 150 ಕೋಟಿಗೂ ಹೆಚ್ಚು ಹಣವನ್ನ ವೆಚ್ಚ ಮಾಡಲಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2800 ಬೂತ್​ಗಳಿವೆ. ಈ ಎಲ್ಲಾ ಬೂತ್​ಗಳಿಗೆ ತಲಾ 5 ಲಕ್ಷ ಹಣ ನೀಡಲಾಗುತ್ತಿದೆ. ಹಣ ಮಾತ್ರವಲ್ಲದೇ ಊರೂರಲ್ಲಿ ಮಟನ್ ಊಟ ಹಾಕಿಸಲು ಕಂಟ್ರಾಕ್ಟ್​ ನೀಡಲಾಗಿದೆ. ಪ್ರತಿ ಕಿ.ಮೀ.ಗೆ ಒಬ್ಬರಂತೆ ಕಂಟ್ರಾಕ್ಟರ್ ನೇಮಕ ಮಾಡಲಾಗಿದೆ’’ ಎನ್ನಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಡಿಯೋ ಒಂದು ವೈರಲ್​ ಆಗಿದೆ.

ಸಂಸದ ಹಾಗೂ ಜೆಡಿಎಸ್​ ಮುಖಂಡ ಶಿವರಾಮೇಗೌಡರ ಪುತ್ರ ಚೇತನ್ ಗೌಡ ಮತ್ತು ಜೆಡಿಎಸ್​ ಕಾರ್ಯಕರ್ತ ಪಿ.ರಮೇಶ್ ನಡುವೆ ನಡೆದಿದೆ ಎನ್ನಲಾಗಿರುವ ಆಡಿಯೋ ವೈರಲ್​ ಆಗಿದೆ.

ಸ್ಫೋಟಕ ಆಡಿಯೋ ವಿವರ ಹೀಗಿದೆ:


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv