ಪ್ರಶ್ನೆ ಮಾಡಿದ ಅನ್ನದಾತನ ಮೇಲೆ ಸಿಎಂ ಎದುರೇ ಜೆಡಿಎಸ್​ ಮುಖಂಡನಿಂದ ಹಲ್ಲೆ..!?

ಮಂಡ್ಯ: ಸಿಎಂ ಕುಮಾರಸ್ವಾಮಿಯನ್ನ ಪ್ರಶ್ನೆ ಮಾಡಿದ್ದಕ್ಕೆ ಅವ್ರ ಎದುರೇ ಜೆಡಿಎಸ್​ ಕಾರ್ಯಕರ್ತರು ರೈತನ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಮದ್ದೂರು ತಾಲೂಕಿನ ಅಜ್ಜಹಳ್ಳಿ ಗ್ರಾಮದಲ್ಲಿ ನಿನ್ನೆ ಸಿಎಂ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಅಜ್ಜಹಳ್ಳಿ ಗ್ರಾಮದ ರೈತ ರವಿ, ಸಿಎಂ ಕುಮಾರಸ್ವಾಮಿಗೆ ಕಬ್ಬಿನ ಬಾಕಿ ಹಣ ಕೊಟ್ಟಿಲ್ಲ, ಭತ್ತಕ್ಕೆ ಬೆಂಬಲ ಬೆಲೆಯನ್ನೂ ನೀಡಿಲ್ಲ ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಿಸಿಕೊಂಡ ಗ್ರಾಮದ ಜೆಡಿಎಸ್ ಮುಖಂಡ ಅಂಗಡಿ ನಾಗ, ಸಿಎಂ ಎದುರೇ ಪಕ್ಕಕ್ಕೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv